More

    ನಿಪ್ಪಾಣಿ ಅಭಿವೃದ್ಧಿಗೆ 290 ಕೋಟಿ ರೂ.

    ನಿಪ್ಪಾಣಿ, ಬೆಳಗಾವಿ: ನನ್ನ ಎರಡನೇ ಆಡಳಿತ ಅವಧಿಯಲ್ಲಿ ಕೇವಲ ನಿಪ್ಪಾಣಿ ನಗರದ ಅಭಿವೃದ್ಧಿ 290.70 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
    ನಗರದಲ್ಲಿ 69 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಹೆಸ್ಕಾಂ ನಗರ ಹಾಗೂ ಗ್ರಾಮೀಣ ಭಾಗದ ಶಾಖಾಧಿಕಾರಿಗಳ ಕಚೇರಿ ಕಟ್ಟಡವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
    ರಾಜಕೀಯಕ್ಕೆ ಬರುವ ಮುಂಚೆ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದವು. 10 ವರ್ಷದ ಆಡಳಿತದಲ್ಲಿ ಹಂತಹಂತವಾಗಿ ಅವುಗಳನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು. ಹೆಸ್ಕಾಂ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಗಳ ಸಹಯೋಗದಲ್ಲಿ 35 ಕೋಟಿ ರೂ. ಅನುದಾನದಲ್ಲಿ ದೀನದಯಾಳ್ ಗ್ರಾಮ ಜ್ಯೋತಿ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ನಿರಂತರ ಜ್ಯೋತಿ ಯೋಜನೆಯಡಿ 5 ಕೋಟಿ ರೂ. ಅನುದಾನದಲ್ಲಿ 951 ಫಲಾನುಭವಿಗಳಿಗೆ, ಅಕ್ರಮ-ಸಕ್ರಮ ಯೋಜನೆಯಡಿ 20.50 ಕೋಟಿ ರೂ. ಅನುದಾನದಲ್ಲಿ 1,689 ಫಲಾನುಭವಿಗಳಿಗೆ, ಬೆಳಕು ಯೋಜನೆಯಡಿ 50 ಲಕ್ಷ ರೂ. ಅನುದಾನದಲ್ಲಿ 672 ಫಲಾನುಭವಿಗಳಿಗೆ, 2.30 ಕೋಟಿ ರೂ. ಅನುದಾನದಲ್ಲಿ ಗಂಗಾ ಕಲ್ಯಾಣ ಯೋಜನೆಯ 142 ಫಲಾನುಭವಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದ್ದು, 30 ಲಕ್ಷ ರೂ. ಅನುದಾನದಲ್ಲಿ 18 ಫಲಾನುಭವಿಗಳಿಗೆ ಸೋಲಾರ್ ಪಂಪ್‌ಸೆಟ್ ವಿತರಿಸಲಾಗಿದೆ ಎಂದರು.

    ಕೊಗನೋಳಿ ಗ್ರಾಮದಲ್ಲಿ 17 ಕೋಟಿ ರೂ. ಅನುದಾನದಲ್ಲಿ 110 ಕೆವಿ ಮತ್ತು ಜತ್ರಾಟ ಗ್ರಾಮದಲ್ಲಿ 8 ಕೋಟಿ ರೂ. ಅನುದಾನದಲ್ಲಿ 110 ಕೆವಿ ವಿದ್ಯುತ್ ಕೇಂದ್ರ ನಿರ್ಮಿಸಲಾಗಿದೆ. ಕಾರದಗಾ ಮತ್ತು ಯರನಾಳ ಗ್ರಾಮದಲ್ಲಿ ಹೊಸದಾಗಿ ವಿದ್ಯುತ್ ಕೇಂದ್ರ ನಿರ್ಮಾಣದ ಪ್ರತಿ ಕೇಂದ್ರಕ್ಕೆ 14 ಕೋಟಿ ರೂ.ದಂತೆ ಒಟ್ಟು 28 ಕೋಟಿ ರೂ. ಅನುದಾನ ಮಂಜೂರಾಗಿದೆ. ತಾಲೂಕಿನ ಪ್ರತಿಯೊಂದು ಮನೆಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ, ಕಾರ್ಯಕಾರಿ ಅಭಿಯಂತ ಸಂಜೀವಕುಮಾರ ಸುಖಸಾರೆ, ಸಹಾಯಕ ಅಭಿಯಂತ ಅಕ್ಷಯ ಚೌಗುಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೇಶಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಭಯ ಮಾನವಿ, ರಾಜೇಂದ್ರ ಸ್ವಾಮಿ, ಸುರೇಶ ತಹಸೀಲ್ದಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts