More

    ನಿಜ ಕಲ್ಯಾಣಕ್ಕೆ ನೆರವಾಗುವುದೇ ಬಜೆಟ್?


    ಬಾಬುರಾವ ಯಡ್ರಾಮಿ ಕಲಬುರಗಿ
    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಲಿರುವ ಆಯವ್ಯಯ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ನಾಮಕರಣ ಬಳಿಕ ಈ ಪ್ರದೇಶದ `ಚಹರೆ’ ಬದಲಿಸುವ ಬಜೆಟ್ ನೀಡಲಿದ್ದಾರೆ ಎಂಬ ಅಪೇಕ್ಷೆ ಇದಕ್ಕೆ ಕಾರಣವಾಗಿದೆ.
    ಈ ಭಾಗದ ಹೆಸರು ಬದಲಿಸಿದರೆ ಸಾಲದು, ನಿಜಾರ್ಥದಲ್ಲಿ ಕಲ್ಯಾಣವಾಗಿಸಬೇಕು ಎಂಬ ಪ್ರತಿಪಕ್ಷಗಳ ಟೀಕೆಗೆ ಎದಿರೇಟು ನೀಡಲು ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ವಾಷರ್ಿಕ 2000 ಕೋಟಿ ರೂ. ಅನುದಾನ ಘೋಷಣೆ ಜತೆಗೆ ಅದರದ್ದೇ ಅದ ಸ್ವಂತ ಅನುಷ್ಠಾನ ಘಟಕ ಆರಂಭಿಸಬೇಕಾಗಿದೆ. 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಅಸ್ತು ನೀಡುವರೇ ಎಂದು ಜನರು ಕಾಯುತ್ತಿದ್ದಾರೆ.
    ಇತ್ತೀಚೆಗಷ್ಟೆ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕನರ್ಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯಚಟುವಟಿಕೆಗಳಿಗೆ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕಿದೆ. ಆಗ ಮಾತ್ರ ಸಂಘ ರಚಿಸಿದ್ದಕ್ಕೂ ಅರ್ಥ ಸಿಗಲಿದೆ. ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ರೈತರ ಜಮೀನಿಗೆ ನೀರು ಹರಿಸಲು ಮುಂದಾಗಬೇಕಿದೆ. ಅರೆಬರೆಯಾಗಿರುವ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಹಣ ನೀಡುವ ಮೂಲಕ ಪೂರ್ಣಗೊಳಿಸಬೇಕು ಎಂಬ ಬೇಡಿಕೆಗೆ ಸಕರ್ಾರ ಸ್ಪಂದಿಸುವ ನಿರೀಕ್ಷೆ ಇದೆ.

    ಉದ್ಯೋಗ ಸೃಷ್ಟಿಗೆ ಸಿಗಲಿ ಆದ್ಯತೆ
    ಬಹುಮುಖ್ಯವಾಗಿರುವ ಕೃಷಿ ಆಧಾರಿತ ಉದ್ಯಮ ಸ್ಥಾಪಿಸುವುದರ ಜತೆಗೆ ಉದ್ಯೋಗ ಸೃಷ್ಟಿಸಲು ಬಜೆಟ್ ಅಗತ್ಯವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೊಸ ಯೋಜನೆ ಅಗತ್ಯವಿದೆ ಎಂಬುದು ತಜ್ಞರ ಮತ್ತು ಜನಸಾಮಾನ್ಯರ ಅಭಿಪ್ರಾಯ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಲು ಸಕರ್ಾರ ಮುಂದಡಿ ಇಡಬೇಕಿದೆ. ಹುಬ್ಬಳ್ಳಿಯಲ್ಲಿ ನಡೆದಿದ್ದ ಇನ್ವೆಸ್ಟ್ ಕನರ್ಾಟಕದಲ್ಲಿ ಕಲಬುರಗಿಯಲ್ಲಿ ಹೂಡಿಕೆ ಮಾಡಲು ಯಾರೂ ಮುಂದೆ ಬರಲಿಲ್ಲ. ಈಗ ಬಜೆಟ್ನಲ್ಲಿ ಆ ಕೊರತೆ ನೀಗಿಸುವಂಥ ಕೆಲಸ ಮಾಡಬೇಕಾಗಿದೆ. ಅಥರ್ಿಕ ಮುಗ್ಗಟ್ಟಿನಿಂದಾಗಿ ಬಂದ್ ಆಗಿರುವ 150ಕ್ಕೂ ಹೆಚ್ಚಿನ ದಾಲ್ಮಿಲ್ಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಅಗತ್ಯವೂ ಇದೆ.

    ಪ್ರತಿವರ್ಷ ತೊಗರಿ ಬೆಳೆಗಾರರು ಸಮಸ್ಯೆಗೆ ಸಿಲುಕುತ್ತಿದ್ದು, ಇದನ್ನು ತಪ್ಪಿಸಲು ಮುಖ್ಯಮಂತ್ರಿಗಳು ಬಜೆಟ್ನಲ್ಲಿ ತೊಗರಿ ಖರೀದಿ, ಮಂಡಳಿ ಅಭಿವೃದ್ಧಿ ಕೆಲಸಗಳಿಗಾಗಿ 2000 ಕೋಟಿ ರೂ. ಆವರ್ತ ನಿಧಿ ಸ್ಥಾಪಿಸಬೇಕು. ಆಗಲೇ ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ.
    | ಮಾರುತಿ ಮಾನ್ಪಡೆ ಕೆಪಿಆರ್ಎಸ್ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts