More

    ನಿಗದಿತ ಸಮಯಕ್ಕೆ ಬಾರದ ಬಸ್‌ಗಳು

    ಸರಗೂರು: ನಿಗದಿತ ಸಮಯಕ್ಕೆ ಬಸ್‌ಗಳ ಸಂಚಾರವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಂಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೋಮವಾರ ಸಾರಿಗೆ ಬಸ್ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

    ಲಂಕೆ ಗ್ರಾಮಕ್ಕೆ ಬಹಳ ದಿನಗಳ ನಂತರ ಬಂದ ಸರ್ಕಾರಿ ಬಸ್‌ಗೆ ತಡೆಯೊಡ್ಡಿದ ಪ್ರತಿಭಟನಾಕಾರರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಚ್.ಡಿ.ಕೋಟೆ ಮತ್ತು ನಂಜನಗೂಡು ಕಡೆಯಿಂದ ಗ್ರಾಮಕ್ಕೆ ಬಸ್ ಬರುತ್ತಿತ್ತು. ಆದರೆ ಬಹಳ ದಿನಗಳಿಂದ ನಿಗದಿತ ಸಮಯಕ್ಕೆ ಬಸ್ ಬರುತ್ತಿಲ್ಲ. ಇದಕ್ಕೆ ಕಾರಣ ರಸ್ತೆ ಹದಗೆಟ್ಟಿರುವುದು ಎಂದು ಕಿಡಿಕಾರಿದರು.

    ನಂಜನಗೂಡು ಕಡೆಯಿಂದ ಬರುವ ಬಸ್‌ಗಳು ಲಂಕೆ ಗ್ರಾಮ ಮಾರ್ಗವಾಗಿ ಎಚ್.ಡಿ.ಕೋಟೆಗೆ ವರ್ಷಗಳ ಹಿಂದೆ ನಿರಂತರವಾಗಿ ಖಾಸಗಿ ಬಸ್‌ಗಳ ಸಂಚಾರವಿತ್ತು. ಅಲ್ಲದೆ 2018ರಲ್ಲಿ ನಂಜನಗೂಡು ಘಟಕದಿಂದ ನಾಲ್ಕು ಸರ್ಕಾರಿ ಬಸ್‌ಗಳನ್ನು ಬಿಡಲಾಗಿತ್ತು. ಅವುಗಳೂ ನಿಗದಿತ ಸಮಯಕ್ಕೆ ಬರುತ್ತಿಲ್ಲ. ಅಲ್ಲದೆ ಎರಡು ವರ್ಷಗಳಿಂದ ಖಾಸಗಿ ಬಸ್‌ಗಳ ಸಂಚಾರವಿಲ್ಲ. ಹೀಗಾಗಿ ಕಾಲೇಜಿಗೆ ಹೋಗಲು ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.

    ವಿದ್ಯಾರ್ಥಿಗಳಾದ ಸತೀಶ್, ದಯಾನಂದ, ಮಧು, ದರ್ಶನ್, ಸುದೀಪ್ ಮತ್ತು ಗ್ರಾಮದ ಮುಖಂಡರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts