More

    ನಿಗದಿತ ಶುಲ್ಕ ಕಡಿಮೆ ಮಾಡಿ ಪರೀಕ್ಷೆ ಮುಂದೂಡಿ

    ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ನೀತಿ ವಿರೋಧಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕುವೆಂಪು ವಿವಿ ಪದವಿ ಕಾಲೇಜುಗಳಲ್ಲಿ 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸೆ.8ರಿಂದ 22ರವರೆಗೆ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗಿದೆ. ಆದರೆ 60 ದಿನ ಮಾತ್ರ ಕಾಲೇಜು ನಡೆಯುತ್ತಿರುವುದರಿಂದ ಕೆಲವು ಸಿಲಬಸ್ ಇನ್ನೂ ಪೂರ್ಣಗೊಂಡಿಲ್ಲ. ಪಾಠಗಳು ಪೂರ್ಣವಾಗದಿರುವುದರಿಂದ 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಬೇಕು. ಇಲ್ಲವಾದಲ್ಲಿ ಎಬಿವಿಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

    ಕಾರ್ಯದರ್ಶಿ ನಿಹಾರಿಕಾ ಗೌಡ ಮಾತನಾಡಿ, ಪರೀಕ್ಷೆ ನಡೆಸಬೇಕಾದರೆ 90 ದಿನ ಪೂರ್ಣವಾಗಿರಬೇಕೆಂಬ ನಿಯಮವಿದೆ. ರಜೆ ದಿನಗಳನ್ನು ಸೇರಿಸಿದರೂ 90 ದಿನ ಮುಗಿದಿಲ್ಲ. ಉಳಿದ ಹತ್ತು ದಿನದಲ್ಲಿ ವಿದ್ಯಾರ್ಥಿಗಳಿಗೆ ಓದಲು ಸಮಯವಿಲ್ಲದಂತಾಗಿದೆ. ಈ ಹಿಂದೆ ಎಬಿವಿಪಿ ಪ್ರತಿಭಟಿಸಿ ಎನ್​ಇಪಿ ಅಡಿಯಲ್ಲಿ ಬರುವ ಪ್ರಥಮ ವರ್ಷದವರಿಗೆ ಪರೀಕ್ಷಾ ಶುಲ್ಕವನ್ನು 300 ರೂ. ಕಡಿಮೆ ಮಾಡಿಸಿತ್ತು. ಸರ್ಕಾರಿ ಕಾಲೇಜಿಗೆ ಬರುವವರು ಬಡವರ ಮಕ್ಕಳಾಗಿರುವುದರಿಂದ ಕಿರಿಯ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts