ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ

2805 Chincholi 05
Published on

ಚಿಂಚೋಳಿ: ಕ್ಷೇತ್ರದ ಪ್ರತಿ ಗ್ರಾಮಕ್ಕೂ ಉತ್ತಮ ರಸ್ತೆ ನಿರ್ಮಿಸಿ ರೈತರು, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸಿ, ಸರ್ಕಾರದ ಅನುದಾನದ ಸದ್ಬಳಕೆಗೆ ಶ್ರಮಿಸಬೇಕು ಎಂದು ಶಾಸಕ ಡಾ. ಅವಿನಾಶ ಜಾಧವ್ ತಾಕೀತು ಮಾಡಿದರು.
ಕೊಡದೂರಿನಲ್ಲಿ ದುರ್ಗಾದೇವಿ ದೇವಸ್ಥಾನದಿಂದ ಬೈಪಾಸ್ ರಸ್ತೆವರೆಗೆ 2019-20ನೇ ಸಾಲಿನ ಕೆಕೆಆರ್ಡಿಬಿಯಡಿ 30 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅವರು, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಬೇಕು. ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಬೇಕು. ಜನತೆಗೆ ತೊಂದರೆ ಉಂಟಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಪ್ರಮುಖರಾದ ಗಂಗಾಧರ ಮೈಲಾರ, ಸಂತೋಷ ಪಾಟೀಲ್, ಶಿವಕುಮಾರ, ಸಂತೋಷ ಗಡಂತಿ, ಶೇಖರ್ ಪಾಟೀಲ್, ಸೂರ್ಯಕಾಂತ ಕಲ್ಲೂರ್, ಶಾಂತಕುಮಾರ ಸಾಲಹಳ್ಳಿ, ಪ್ರಶಾಂತ ಕದಂ, ವಿಷ್ಣು ಪರುತೆ, ರಮೇಶ ಕಿಟ್ಟದ್, ಮೋತಿರಾಮ ಚವ್ಹಾಣ್, ಸಂತೋಷ ಕಡಬೂರ್, ರವಿ ರುದ್ನೂರ್, ಶರಣು ಚಂದಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net