More

    ನಾವ್ಯಾರು ಹೈಕಮಾಂಡ್‌ಗಿಂತ ದೊಡ್ಡವರಲ್ಲ, ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ, ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂತ ಉಚಿತ ಲಸಿಕಾ ಅಭಿಯಾನ

    ಬೆಂಗಳೂರು ಗ್ರಾಮಾಂತರ: ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ, ಹೈಕಮಾಂಡ್‌ಗಿಂತ ನಾವ್ಯಾರು ದೊಡ್ಡವರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಹೊಸಕೋಟೆಯ ವಿವೇಕಾನಂದ ಖಾಸಗಿ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ತೀರ್ಮಾನ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು, ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ಪಕ್ಷದ ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

    ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಪಕ್ಷದ ವರಿಷ್ಠರು ನೀಡುವ ಅಧಿಕಾರವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಷ್ಟೇ ನಮ್ಮ ಕರ್ತವ್ಯ ಎಂದರು.

    ರಾಜೀನಾಮೆ ಪತ್ರವಲ್ಲ: ಕೆಲವು ಮಾಧ್ಯಮಗಳಲ್ಲಿ ವಲಸೆ ಸಚಿವರು ರಾಜೀನಾಮೆ ಪತ್ರ ಹಿಡಿದುಕೊಂಡೇ ವಿಧಾನಸೌಧಕ್ಕೆ ಬಂದಿದ್ದರು ಎಂದು ಬಿಂಬಿಸಲಾಗಿತ್ತು. ಆದರೆ ಅದು ಸತ್ಯಕ್ಕೆ ದೂರವಾದದ್ದು, ಯಾರೂ ರಾಜೀನಾಮೆ ಪತ್ರ ಹಿಡಿದು ಬಂದಿರಲಿಲ್ಲ, ಕ್ಷೇತ್ರದ ಅಭಿವೃದ್ಧಿ ಕುರಿತ ಕೆಲವೊಂದು ಚರ್ಚೆಗೆ ಪತ್ರಗಳನ್ನು ತರಲಾಗಿತ್ತು ಎಂದು ಎಂಟಿಬಿ ಸ್ಪಷ್ಟಪಡಿಸಿದರು.

    ವರಿಷ್ಠರು ಸೂಚಿಸಿದರೆ ರಾಜೀನಾಮೆ: ಸಿಎಂ ಯಡಿಯೂರಪ್ಪ ಅವರಷ್ಟೇ ಅಲ್ಲ, ಪಕ್ಷದ ವರಿಷ್ಠರು ಸೂಚಿಸಿದರೆ ನಾವೂ ರಾಜೀನಾಮೆ ನೀಡಲು ಸಿದ್ಧ. ಪಕ್ಷಕ್ಕಿಂತ ಯಾವುದೂ ಮುಖ್ಯವಲ್ಲ, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ನಮ್ಮ ಸಂಪೂರ್ಣ ಸಮ್ಮತಿ ಇದೆ ಎಂದು ಎಂಟಿಬಿ ಪುನರುಚ್ಚರಿಸಿದರು.

    ವ್ಯಾಕ್ಸಿನ್ ಮಾರನೇ ದಿನವೇ ಈಜು: ಕರೊನಾ ವ್ಯಾಕ್ಸಿನ್ ತೆಗೆದುಕೊಂಡರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾಗುತ್ತದೆ ಎಂದು ಅಪಪ್ರಚಾರ ಮಾಡಲಾಯಿತು. ಇದೆಲ್ಲ ಸುಳ್ಳು, ಹೆಚ್ಚೆಂದರೆ ಕೆಲವರಿಗೆ ಸಣ್ಣ ಸುಸ್ತು, ಸ್ವಲ್ಪಮಟ್ಟಿಗಿನ ಜ್ವರ ಬರಬಹುದೇ ಹೊರತು ಇನ್ಯಾವುದೇ ಅಡ್ಡಪರಿಣಾಮವಿಲ್ಲ, ನಾನೂ ಎರಡು ಡೋಸ್ ಪಡೆದಿದ್ದೇನೆ, ಡೋಸ್ ಪಡೆದ ಮಾರನೇ ದಿನವೇ ಈಜು ಹೊಡೆದಿದ್ದೇನೆ, ನನಗೇನು ಆಗಿಲ್ಲ ಎಂದು ಎಂಟಿಬಿ ನಗೆ ಬೀರಿದರು.
    ಕರೊನಾ ಸೋಂಕಿನ ನಿಯಂತ್ರಣಕ್ಕೆ ವ್ಯಾಕ್ಸಿನ್ ರಾಮಬಾಣವಾಗಿದೆ. ಈ ಬಗ್ಗೆ ಯಾರೂ ವದಂತಿಗಳಿಗೆ ಕಿವಿಗೊಡಬಾರದು. ವ್ಯಾಕ್ಸಿನ್ ಮೂಲಕ ಪ್ರಾಣ ರಕ್ಷಣೆ ಜತೆಗೆ ಕುಟುಂಬ ರಕ್ಷಣೆಗೆ ಮುಂದಾಗಬೇಕು, ನಿಮ್ಮ ಸ್ನೇಹಿತರು, ಬಂಧುಗಳು, ಕುಟುಂಬದವರಿಗೆ ವ್ಯಾಕ್ಸಿನ್ ಪಡೆಯುವಂತೆ ತಿಳಿ ಹೇಳಬೇಕು ಎಂದು ಮನವಿ ಮಾಡಿದರು.

    ಶಿಕ್ಷಕರಿಗೆ ಕಿಟ್: ಕರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲ ಕ್ಷೇತ್ರಗಳಂತೆ ಖಾಸಗಿ ಶಾಲಾ ಶಿಕ್ಷಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವಿದ್ಯೆ ನೀಡಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ಖಾಸಗಿ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ಎಂಟಿಬಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts