More

    ನಾವು ಬದಲಾದರೆ ಸಮಾಜ ಬದಲಾಗಲಿದೆ

    ಕಲಬುರಗಿ: ಬುದ್ಧ, ಬಸವಣ್ಣನವರ ಸಾಮಾಜಿಕ ಸಮಾನತೆ ಕ್ರಾಂತಿಕಾರಿಕ ವಿಚಾರಗಳನ್ನು ಅರಿತು ಅವರ ಹಾದಿಯಲ್ಲಿಯೇ ಸಾಗಿ ಆಧುನಿಕ ಭಾರತದಲ್ಲಿ ಮಹಾನ್ ಮಾನವತಾವಾದಿಯಾಗಿ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್, ಇಡೀ ಜಗತ್ತೇ ಗೌರವಿಸುವ ನೇತಾರರಾಗಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ, ಮಾಜಿ ಮೇಯರ್ ಧರ್ಮಪ್ರಕಾಶ ಪಾಟೀಲ ಹೇಳಿದರು.
    ಮಹಾತ್ಮಾ ಬಸವೇಶ್ವರ ಕಾಲನಿಯ ಬುದ್ಧ, ಬಸವ, ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಎಂ.ಬಿ.ನಗರದ ಬಸವೇಶ್ವರ ವೃತ್ತದಲ್ಲಿ ಮಹಾನಾಯಕನೀತ ಮಹಾಮಾನವ ಡಾ.ಅಂಬೇಡ್ಕರ್ ಎನ್ನುವ ವಿಶೇಷ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಸಾಹಿತಿ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪಶ್ಯತೆಯ ಸಂಕಷ್ಟ ಎದುರಿಸಿದರೂ ಹೆದರದೆ ತಮ್ಮ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸಿದ ಮತ್ತು ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕರಾಗಿ ಬೆಳೆದರು ಎಂದರು.
    ಮಾಜಿ ಉಪಮೇಯರ್ ನಂದಕುಮಾರ ಮಾಲಿಪಾಟೀಲ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದಶರ್ಿ ಆರ್.ಜಿ.ಶಟಗಾರ, ಜೆಡಿಎಸ್ ಮುಖಂಡ ಬಸವರಾಜ ಬಿರಬಿಟ್ಟೆ, ಪಾಲಿಕೆ ಸದಸ್ಯ ಮಲ್ಲಿಕಾಜರ್ುನ ಟೆಂಗಳಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದಿನೇಶ ದೊಡ್ಮನಿ, ಪ್ರಮುಖರಾದ ಶಿವಾನಂದ ಹೊನಗುಂಟಿ, ಧರ್ಮಣ್ಣ ಕೋನೆಕರ್, ಮಲ್ಲಿನಾಥ ಬಿರಾದಾರ, ಜಗದೀಶ ಪಾಟೀಲ, ಮಂಜುನಾಥ ಕಳಸ್ಕರ್, ಸಿದ್ಧರಾಮ ಯಳವಂತಗಿ, ನಾಗಣ್ಣ ಕುಸನೂರ, ಕವಿರಾಜ್ ಕೋಳಕೂರ, ಪ್ರಭವ ಪಟ್ಟಣಕರ್, ಎಸ್.ಎಂ.ಪಟ್ಟಣಕರ್, ರವಿಕುಮಾರ ಶಹಾಪುರಕರ್, ಸಂಗಮನಾಥ ಪುಂಡಾ, ಇಫರ್ಾನ್ ಪಟೇಲ್, ಇದ್ದರು.

    ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಜಾತಿ ವ್ಯವಸ್ಥೆ ನಿಮರ್ೂಲನೆ ಮಾಡಲು ಶ್ರಮಿಸಿದ ಡಾ.ಅಂಬೇಡ್ಕರ್ ಕಾರ್ಯ ಶ್ಲಾಘನೀಯವಾದದ್ದು. ಸಮಾಜಕ್ಕೆ ಬುದ್ಧ , ಬಸವ, ಅಂಬೇಡ್ಕರ್ ಅವರ ಕೊಡುಗೆ ಅಪಾರ.
    ಜಗದೀಶ ಪಾಟೀಲ್
    ಬಸವತತ್ವ ಆಚರಣಾ ಸಂಸ್ಥೆ
    ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts