More

    ನಾಳೆ ‘ಹಳೇ ಪಿಂಚಣಿ ಸಂಕಲ್ಪ ಯಾತ್ರೆ’

    ಬೆಳಗಾವಿ: ರಾಜ್ಯ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಿ ನ.5 ರಂದು ‘ಹಳೆ ಪಿಂಚಣಿ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಟಿ.ಲೋಕೇಶ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.5ರಂದು ಕಿಲ್ಲಾ ಕೋಟೆಯಿಂದ ಪ್ರಾರಂಭವಾಗಲಿರುವ ಸಂಕಲ್ಪ ಯಾತ್ರೆಯು ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಚನ್ನಮ್ಮ ವೃತ್ತದ ಮೂಲಕ ಸರ್ದಾರ್ ಮೈದಾನದಲ್ಲಿ ಕೊನೆಯಾಗಲಿದೆ. ಯಾತ್ರೆಯಲ್ಲಿ ಸುಮಾರು ಆರು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

    ಎನ್‌ಪಿಎಸ್‌ನಿಂದ ನೌಕರರ ಸಂಧ್ಯಾಕಾಲದ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಿವೃತ್ತಿ ನಂತರ ನೌಕರರ ಬದುಕು ಸಂತೋಷದಿಂದ ಇರಬೇಕೆಂದರೆ ಎನ್‌ಪಿಎಸ್ ನಿರ್ಮೂಲನೆಯಾಗಬೇಕು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಮರುಜಾರಿಗೊಳಿಸುವಂತೆ ಒತ್ತಾಯಿಸಿ ಹಲವು ತಿಂಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಸರ್ಕಾರ ಮಾತ್ರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ 39 ಇಲಾಖೆಗಳ 2.5 ಲಕ್ಷ ನೌಕರರು, ಜಿಲ್ಲೆಯಲ್ಲಿ 15 ಸಾವಿರ ನೌಕರರು ನೂತನ ಪಿಂಚಣಿ ಯೋಜನೆಗೆ ಒಳಪಟ್ಟಿದ್ದು, ಈಗಾಗಲೇ ಪಂಜಾಬ್, ಛತ್ತಿಸಗಡ್, ಜಾರ್ಖಂಡ್ ಮತ್ತು ರಾಜಸ್ತಾನಗಳಲ್ಲಿ ಎನ್‌ಪಿಎಸ್ ರದ್ದುಗೊಳಿಸಲಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸತೀಶ ಬುರುಡ, ದೀಪಕ, ಮಾರುತಿ, ಎಸ್.ಎಂ.ಪಾಟೀಲ, ಉಮೇಶ ಟೊಪ್ಪದ, ಶ್ಯಾಮ ಮಾಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts