More

    ನಾಲ್ಕು ಭಾಷೆಯಲ್ಲಿ ಬೆಳಗಾವಿ ಕಾವ್ಯ ಸಮ್ಮೇಳನ

    ಬೆಳಗಾವಿ: ಬರಹ ಲೋಕದಲ್ಲಿ ಹಳಬರ ಅನುಭವ ಮತ್ತು ಹೊಸಬರ ಆಸಕ್ತಿಯನ್ನು ಒಂದೇ ವೇದಿಕೆಯ ಮೇಲೆ ತರುವ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ‘ಆನ್‌ಲೈನ್ ಬೆಳಗಾವಿ ಕಾವ್ಯ ಸಮ್ಮೇಳನ’ ಆಯೋಜಿಸಲಾಗಿದೆ ಎಂದು ರೋಸ್ಟ್ರಮ್ ಡೈರೀಸ್ ಸಂಸ್ಥಾಪಕ ಅಭಿಷೇಕ ಬೆಂಡಿಗೇರಿ ತಿಳಿಸಿದರು. ನಗರದ ಭರತೇಶ ಶಿಕ್ಷಣ ಸಂಸ್ಥೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಯುಗ ಬೆಳೆದಂತೆ ಯುವ ಸಮುದಾಯಕ್ಕೆ ಸಾಹಿತ್ಯ ಕ್ಷೇತ್ರದತ್ತ ಆಸಕ್ತಿ ಕಡಿಮೆಯಾಗುತ್ತಿದೆ.

    ಹೀಗಾಗಿ, ಕೆಲ ಯುವ ಬರಹಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ‘ಆನ್‌ಲೈನ್ ಬೆಳಗಾವಿ ಕಾವ್ಯ ಸಮ್ಮೇಳನ’ ಆಯೋಜಿಸಲಾಗುತ್ತಿದೆ. ಆಸಕ್ತ ಬರಹಗಾರರು ರಚಿಸಿರುವ ಕವನಗಳನ್ನು ರೋಸ್ಟ್ರಮ್ಡೈ ರೀಸ್‌ನ www.belagavipoetryfestival.com ಸಲ್ಲಿಕೆ ಮಾಡಬೇಕು.

    4 ಭಾಷೆಗಳಲ್ಲಿ ಕವಿತೆಗಳನ್ನು ಸ್ವೀಕರಿಸಲಾಗುವುದು ಎಂದರು. ಕಳೆದ ವರ್ಷ ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಆನ್‌ಲೈನ್ ಮೂಲಕ ಕಾವ್ಯಗಳನ್ನು ಆಹ್ವಾನಿಸಲಾಗಿತ್ತು. ನೂರಾರು ಜನರು ಕವನಗಳನ್ನು ಬರೆದು ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ‘ಬೆಳಗಾವಿ ಕಾವ್ಯ ಸಮ್ಮೇಳನ’ ಆಯೋಜಿಸಲಾಗುತ್ತಿದೆ. ಆಸಕ್ತರು ಮೇ 16ರ ಒಳಗಾಗಿ ಕವನಗಳನ್ನು ಸಲ್ಲಿಕೆ ಮಾಡಬೇಕು. ಜೂನ್ 6ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ. ಅಲ್ಲದೆ, ಸಮ್ಮೇಳನದಲ್ಲಿ ಆಯ್ಕೆಯಾದ ಕವನ ಸಂಕಲನಗಳನ್ನು ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಮಾ. 21ರಂದು ‘ವಿಶ್ವ ಕಾವ್ಯ ದಿನ’ದಂದು ‘ಬೆಳಗಾವಿ ಕಾವ್ಯ ಸಮ್ಮೇಳನ’ಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಿಂದ ಮತ್ತು ವಿದೇಶದಿಂದ 150ಕ್ಕಿಂತ ಹೆಚ್ಚು ಕವನಗಳು ಸಲ್ಲಿಕೆಯಾಗಿವೆ. ಹೆಚ್ಚಿನ ಮಾಹಿತಿಗಾಗಿ ಮೊ. 9986186781 ಸಂಪರ್ಕಿಸಬಹುದು ಎಂದು ಅಭಿಷೇಕ ಬೆಂಡಿಗೇರಿ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿನೋದ ದೊಡ್ಡಣ್ಣವರ, ಜೆ.ಸ್ವಾತಿ, ಎ.ಡೇವಿಡ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts