More

    ನಾಣ್ಯಗಳ ಮೂಲಕ ಠೇವಣಿ


    ಯಾದಗಿರಿ: ಚುನಾವಣೆ ಸಂದರ್ಭದಲ್ಲಿ ಅಭ್ಯಥರ್ಿಗಳು ಹರಕೆ ಕಟ್ಟುವುದು, ದೇವಸ್ಥಾನ ಸಂದಶರ್ಿಸುವುದು, ದೀಡ್ ನಮಸ್ಕಾರ ಹಾಕುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭ್ಯಥರ್ಿ ನಾಮಪತ್ರ ಸಲ್ಲಿಸಲು ಠೇವಣಿ ಇಡಬೇಕಾದ ಹಣವನ್ನು ನಾಣ್ಯದ ರೂಪದಲ್ಲಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
    ಯಾದಗಿರಿ ಕ್ಷೇತ್ರದಿಂದ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ೆ ಮಾಡಿರುವ ಅಭ್ಯಥರ್ಿ ಯಂಕಪ್ಪ ರಾಮಮಸುದ್ರ ಮಂಗಳವಾರ 1 ರೂ.ಮುಖಬೆಲೆಯ 10 ಸಾವಿರ ರೂ.ನಾಣ್ಯಗಳನ್ನು ಮೂಟೆಯೊಳಗೆ ಕಟ್ಟಿಕೊಂಡು ಇಲ್ಲಿನ ತಹಸೀಲ್ ಕಚೇರಿಗೆ ಬಂದಿದ್ದಾರೆ. ಇದನ್ನು ಕಂಡ ಚುನಾವಣಾ ಸಿಬ್ಬಂದಿ ಕ್ಷಣಕಾಲ ದಂಗಾದರು. ಅಲ್ಲದೆ ಅಷ್ಟೂ ನಾಣ್ಯ ಎಣಿಸುವುದರೊಳಗೆ ಸುಸ್ತಾದರು.
    ಮೈಸೂರು ಮಾನಸಗಂಗೋತ್ರಿ ವಿವಿಯ ಎಂಎ ರಾಜ್ಯಶಾಸ್ತ್ರ ವಿಭಾಗದ ವಿದ್ಯಾಥರ್ಿಯಾಗಿರುವ ಯಂಕಪ್ಪ ಕಳೆದೊಂದು ವರ್ಷದಿಂದ ಮನೆ ತೊರೆದು ಯಾದಗಿರಿ ಜಿಲ್ಲಾದ್ಯಂತ ಪಾದಯಾತ್ರೆ ಮೂಲಕ ಮೂಲಕ ಒಂದು ರೂ.ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಕೆಲವರು 10 ರೂ.ನೋಟು ನೀಡಿದರೂ ಸ್ವೀಕರಿಸದೆ, ನೀವು 1 ರೂ.ನೀಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುವೆ ಎಂಬ ಘೋಷವಾಕ್ಯದಡಿ ಪಾದಯಾತ್ರೆ ಹಮ್ಮಿಕೊಂಡಿದ್ದರು.

    ಬಡತನದಲ್ಲೇ ಬೆಳೆದ ಯಂಕಪ್ಪ ಸಮಾಜದಲ್ಲಿನ ವೈರುಧ್ಯಗಳನ್ನು ಕಂಡು ಏನಾದರೂ ಬದಲಾವಣೆ ತರಬೇಕು ಎಂಬ ಕಾರಣದಿಂದ ಕಳೆದ ವರ್ಷ ಮನೆ ಬಿಟ್ಟು ಪಾದಯಾತ್ರೆ ನಡೆಸಿದ್ದರು. ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂದು ಪ್ರಜ್ಞಾವಂತರು ಹರಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts