More

    ನಾಡಿನ ಕುರಿತು ಅಭಿಮಾನ ಬೆಳೆಸಿಕೊಳ್ಳಿ

    ಚಿತ್ರದುರ್ಗ: ಕನ್ನಡ ನಾಡು-ನುಡಿ, ನೆಲ-ಜಲದ ಕುರಿತು ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೆಸಿಂಗ್ ಹೇಳಿದರು.

    ಕೋಟೆನಾಡು ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದ ಮುಂಭಾಗದ ರಸ್ತೆಯಲ್ಲಿ ಬುಧವಾರ ನಡೆದ 3ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

    ದೇಶದಲ್ಲಿ ಭಾವೈಕ್ಯತೆ, ಸಹಬಾಳ್ವೆ, ಸಹೋದರತ್ವ, ಸ್ವಾಭಿಮಾನ ಉಳಿಯಲು ಶ್ರಮಿಕ ವರ್ಗ ಬಹುಮುಖ್ಯ ಕಾರಣ. ಕನ್ನಡ ಉಸಿರಾಗಬೇಕು, ನಾಡು ಹಸಿರಾಗಲು ಎಲ್ಲರೂ ಬದ್ಧತೆ ತೊರಬೇಕು ಎಂದು ಸಲಹೆ ನೀಡಿದರು.

    ಸಾಹಿತಿ ಹುರಳಿ ಎಂ.ಬಸವರಾಜ್ ಮಾತನಾಡಿ, ಕನ್ನಡದ ಸುಪ್ರಸಿದ್ಧ ಕವಿವರ್ಯರು ಭಾಷೆಯ ಹಿರಿಮೆ-ಗರಿಮೆ ಹೆಚ್ಚಿಸಿದ್ದಾರೆ. ಯಾವುದೇ ಕೆಲಸ ಮೇಲು-ಕೀಳಲ್ಲ. ವೃತ್ತಿಯ ಮೇಲೆ ಗೌರವವಿಟ್ಟು ಭವಿಷ್ಯ ರೂಪಿಸಿಕೊಳ್ಳುವುದೇ ಜೀವನ ಎಂದರು.

    ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಮುಖಂಡ ಸೋಮೇಂದ್ರ, ಹಾಸ್ಯಕವಿ ಜಗನ್ನಾಥ್, ನಾರಾಯಣಸ್ವಾಮಿ, ಮೋಟಾರು ವಾಹನ ಇಲಾಖೆಯ ಹಿರಿಯ ನಿರೀಕ್ಷಕ ಮಾರುತೇಶ್, ಸಂಘದ ಅಧ್ಯಕ್ಷ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಸಚ್ಚಿನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts