More

    ನಾಡಪ್ರಭುಗಳ ಸಾಧನೆ ಸಮಾಜಕ್ಕೆ ಸಾರಿದ ಬಿಜೆಪಿ

    ಕೋಲಾರ: ಬಿಜೆಪಿ ಸರ್ಕಾರ ನಾಡಪ್ರಭು ಕೆಂಪೇಗೌಡರ ಸಾಧನೆಯನ್ನು ಸಮಾಜಕ್ಕೆ ಸಾರುವ ಕೆಲಸ ಮಾಡಿದೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು. ನಗರದ ಟೇಕಲ್ ರಸ್ತೆಯಲ್ಲಿನ ಮಕ್ಕಳ ಉದ್ಯಾನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 152ನೇ ಜನ್ಮದಿನ ಸಮಾರಂಭ ಹಾಗೂ ಬಡವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕೆಂಪೇಗೌಡರು ವಿಶ್ವ ಭೂಪಟದಲ್ಲಿ ಬೆಂಗಳೂರನ್ನು ವಿಶೇಷವಾಗಿ ನೋಡುವ ರೀತಿ ನಿರ್ಮಿಸಿದ್ದಾರೆ. ಕೋಲಾರದಲ್ಲಿ ಯುಜಿಡಿ, ರಸ್ತೆ ನಿರ್ಮಾಣ ಮಾಡುವ ಮೂಲಕ ಟಿ.ಚೆನ್ನಯ್ಯನವರು ಇತಿಹಾಸ ಪುಟಗಳಲ್ಲಿ ಉಳಿದಿದ್ದಾರೆ ಎಂದು ಸ್ಮರಿಸಿದರು. ರಾಜ್ಯ ಸರ್ಕಾರ ನಾಡಪ್ರಭುಗಳಿಗೆ ಗೌರವ ನೀಡುವ ದಿಸೆಯಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿಯ ಕಂಚಿನ ಪುತ್ಥಳಿ ಲೋಕಾರ್ಪಣೆ ಮಾಡಿದೆ. ಕೆಂಪೇಗೌಡರ ಹಾದಿಯಲ್ಲಿ ಒಕ್ಕಲಿಗ ಸಮಾಜದ ಬಾಲಗಂಗಾಧರ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ ಬಡವರಿಗೆ ವಿದ್ಯಾಭ್ಯಾಸದ ಜತೆಗೆ ಆಶ್ರಯ ಕೊಟ್ಟದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.

    ನಗರದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಕೆರೆಯಂಗಳದಲ್ಲಿ ಪಾರ್ಕ್ ನಿರ್ಮಾಣ, ಮಹನೀಯರು ಪುತ್ಥಳಿ ನಿರ್ಮಿಸಲು ಸ್ಥಳ ಗುರುತಿಸಲಾಗುತ್ತಿದೆ. ಪ್ರಕೃತಿ ಉಳಿವಿಗಾಗಿ ಗಿಡ, ಮರ ಬೆಳೆಸಬೇಕು. ಉಸಿರಾಡಲು ಗಾಳಿ ಮುಖ್ಯ ಎಂಬುದು ಕರೊನಾ ಸಮದರ್ಭದಲ್ಲಿ ಅರ್ಥವಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ, ಕೆಂಪೇಗೌಡರು ನಮ್ಮಿಂದ ದೂರವಾಗಿ 5 ಶತಮಾನ ಕಳೆದರೂ ಅವರು ಮಾಡಿದ ಸೇವೆ ಸ್ಮರಣೀಯ ಎಂದರು.

    ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್ ಮಾತನಾಡಿ, ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತವಾಗದೆ ಸಮಾಜದ ಎಲ್ಲ ವರ್ಗದ ಬಡವರನ್ನು ಗುರುತಿಸುವಂತೆ ಮಾಡಿದ್ದರು. ಅವರ ಜಯಂತಿಯ ಹೆಸರಿನಲ್ಲಿ ಬಡವರನ್ನು ಗುರುತಿಸಿ ದಿನಸಿ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದರು.

    ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಕುಡಾ ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಮಮತಮ್ಮ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ, ಬಿಜೆಪಿ ಮಾಧ್ಯಮ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ, ನಗರಾಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಬಿ.ವಿ.ಮಹೇಶ್, ಎಚ್.ಬೈಚಪ್ಪ, ಕಮಲನಾಥ್, ಅಶೋಕ್ ರೆಡ್ಡಿ, ಅಶೋಕ್, ಪ್ರಕಾಶ್ ಗೌಡ, ಮು.ರಾಘವೇಂದ್ರ, ಹನುಮಪ್ಪ, ಸಾಮಾ ಅನಿಲ್, ಶ್ರೀನಿವಾಸಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts