More

    ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ಸರಳ ಆಚರಣೆ

    ಚಿತ್ತಾಪುರ : ರಾಷ್ಟ್ರಕೂಟರ ಕುಲದೇವತೆ ಎಂದೇ ಖ್ಯಾತಿ ಪಡೆದ ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ಕರೋನಾ ಹಿನ್ನೆಲೆಯಲ್ಲಿ ರದ್ದುಪಡಿಸಿ ಕೇವಲ ಪಲ್ಲಕ್ಕಿ ಉತ್ಸವ ಶನಿವಾರ ಸರಳವಾಗಿ ಆಚರಿಸಲಾಯಿತು.
    ಜಿಲ್ಲಾಡಳಿತ ಆದೇಶದಂತೆ ತಾಲೂಕು ಆಡಳಿತ ಜಾತ್ರೆಯನ್ನು ರದ್ದುಪಡಿಸಿ ಯಾವುದೇ ಪೂಜೆ, ಪಲ್ಲಕ್ಕಿ ಹಾಗೂ ವಿಜೃಂಭಣೆಗೆ ಅವಕಾಶ ನೀಡದೆ ಸರಳವಾಗಿ ಆಚರಿಸಲು ತಿರ್ಮಾನಿಸಲಾಗಿತ್ತು.
    ಪಟ್ಟಣದ ಲಚ್ಚಪ್ಪ ನಾಯಕ ಮನೆಯಲ್ಲಿ ಗಣಪತಿ ಹಾಗೂ ಯಲ್ಲಮ್ಮ ದೇವಿಯ ಪಲ್ಲಕ್ಕಿಗೆ ತಹಸೀಲ್ದಾರ್ ಉಮಾಕಾಂತ ಹಳ್ಳೆ ಶನಿವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
    ನಾಯಕ ಮನೆಯಿಂದ ತೆರೆದ ವಾಹನದಲ್ಲಿ ಪಲ್ಲಕ್ಕಿವಿಟ್ಟು ಮೆರವಣಿಗೆ ಕೇವಲ ಒಂದು ತಾಸಿನಲ್ಲಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತಲುಪಿತು. ರಸ್ತೆಯುದ್ದಕ್ಕೂ ದೂರದಲ್ಲಿ ಅಪಾರ ಭಕ್ತರು ಪುಷ್ಪಾರ್ಚನೆ ಮಾಡಿ ಭಕ್ತಿ ಸಮಪರ್ಿಸಿದರು. ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕಣರ್ಿ ಅವರು 6 ಕ್ವಿಂಟಾಲ್ ದಾರಿಯುದ್ದಕ್ಕೂ ಪುಷ್ಪಾರ್ಚನೆ ಮಾಡಿಸಿದರು. ವಾಹನದಲ್ಲಿ ಕುಳಿತು ಡೊಳ್ಳು, ಹಲಗೆ ನುಡಿಸಿದರು. ದೇವಸ್ಥಾನಕ್ಕೆ ಪಲ್ಲಕ್ಕಿ ತಲುಪಿದ ನಂತರ ಗರ್ಭಗುಡಿ ಸುತ್ತಲು ಪಲ್ಲಕ್ಕಿ 5 ಸುತ್ತು ಹಾಕಲಾಯಿತು. ದೇವಸ್ಥಾನದಲ್ಲಿ ಸೇಡಂ ಆಯುಕ್ತ ರಮೇಶ ಕೋಲಾರ ಪೂಜೆ ಸಲ್ಲಿಸಿದರು. ತಾಪಂ ಇಒ ಡಾ. ಬಸಲಿಂಗಪ್ಪ ಡಿಗ್ಗಿ, ಕಂದಾಯ ಇಲಾಖೆಯ ದಶರಥ ಮಂತಟ್ಟಿ, ಪ್ರಮುಖರಾದ ರತ್ನಾಕರ ನಾಯಕ, ಚಂದ್ರಶೇಖರ ಅವಂಟಿ ಇದ್ದರು.
    ಭಕ್ತರು ದಂಡು: ಇತರ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಜಾತ್ರೆ ರದ್ದಾದ ಮಾಹಿತಿ ಗೊತ್ತಾಗದೆ ಅಪಾರ ಸಂಖ್ಯೆಯಲ್ಲಿ ಬಂದು ದೇವಸ್ಥಾನದ ದೂರದಲ್ಲೇ ಉಳಿದರು. ದೂರದಿಂದಲೇ ದರ್ಶನ ಪಡೆದರು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯ ಹಾಗೂ ವಿಜಯಪುರ, ಬೆಳಗಾವಿ ಜಿಲ್ಲೆಗಳಿಂದ ಆಪಾರ ಭಕ್ತರು ವಾಹನದಲ್ಲಿ ಬಂದರು. ಅವರನ್ನು ಪೊಲೀಸರು ತಡೆದರು. ರಸ್ತೆ ಬದಿಯಲ್ಲಿಯೇ ಹಾಗೂ ದೇವಸ್ಥಾನದ ದೂರದಲ್ಲೇ ನಿಂತು ದರ್ಶನ ಪಡೆದು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋದರು.
    ಸ್ಥಳೀಯ ಕೆಲ ಭಕ್ತರು ದೇವಸ್ಥಾನದ ಹೊರಗೆ ದೂರದಲ್ಲಿ ಕಟ್ಟೆಯ ಮೂತರ್ಿಗೆ ನೈವೇದ್ಯ ಸಲ್ಲಿಸಿದರು. ಭಕ್ತರ ದರ್ಶನಕ್ಕೆ ನಿಷೇಧಿಸಿ ದೇವಸ್ಥಾನದ ಬಾಗಿಲು ಮುಚ್ಚಿರುವುದರಿಂದ ದೇವಸ್ಥಾನದ ಒಳಗೆ ಬಿಕೋ ಎನ್ನುತ್ತಿತ್ತು.
    ಸಿಪಿಐ ಕೃಷ್ಣಪ್ಪ ಕಲ್ಲದೇವರ, ಪಿಎಸ್ಐ ಶ್ರೀಶೈಲ್ ಅಂಬಾಟಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts