More

    ನಾಗರಿಕರ ಕರೆಗೆ ಎಸ್ಪಿ ತ್ವರಿತ ಸ್ಪಂದನೆ

    ಬೆಳಗಾವಿ: ‘ಅಮ್ಮ ನೀವು ಖರ್ಚು ಮಾಡಿಕೊಂಡು ನಮ್ಮ ಕಚೇರಿಗೆ ಬರಬೇಡಿ. ನಮ್ಮ ಇನ್ಸ್‌ಪೆಕ್ಟರ್ ತಮ್ಮನ್ನು ಸಂಪರ್ಕಿಸಿ ತಮಗೆ ಆಗುತ್ತಿರುವ ತೊಂದರೆ ಸರಿಪಡಿಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಅಭಯ ನೀಡಿದರು.

    ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ಕರೆ ಮಾಡಿ, ಸಮಸ್ಯೆ ಹೇಳಿಕೊಂಡಾಗ ಎಸ್ಪಿ ಡಾ.ಸಂಜೀವ ಪಾಟೀಲ ಅವರು, ನಾಗರಿಕರ ಸಮಸ್ಯೆ ಕೇಳಿ, ಪ್ರಕರಣಗಳ ಕುರಿತು ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದರು.

    ಬೆಳಗ್ಗೆ 11ರಿಂದಲೇ ಕರೆ ಸ್ವೀಕರಿಸಲು ಆರಂಭಿಸಿದ ಅವರು, ‘ನಮಸ್ಕಾರ‌್ರೀ.. ನಾನ್ ಎಎಸ್ಪಿ ಮಾತನಾಡಾತೇನ್ರಿ.. ನಿಮ್ಮ ಊರು, ಹೆಸರು, ಸಮಸ್ಯೆ ಏನು ಹೇಳಿ’ ಎನ್ನುತ್ತಲೇ 2 ಗಂಟೆಗಳ ಅವಧಿಯಲ್ಲಿ 65 ನಾಗರೀಕರ ಕರೆಗೆ ಸ್ಪಂದಿಸಿದರು. ಅಥಣಿ, ಸವದತ್ತಿ, ಚಿಕ್ಕೋಡಿ, ಖಾನಾಪುರ, ನಿಪ್ಪಾಣಿ, ರಾಮದುರ್ಗ ಸೇರಿ ಕೇವಲ ಜಿಲ್ಲೆ ಮಾತ್ರವಲ್ಲ, ಹಾವೇರಿ, ರಾಣೆಬೆನ್ನೂರಿನಿಂದ ಬಂದ ಕರೆಗಳಿಗೂ ಸ್ಪಂದಿಸಿ, ಸಮೀಪದ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಸಲಹೆ ನೀಡಿದರು.

    ಅಲ್ಲದೆ, ಶಾಲಾ ಅವಧಿಯಲ್ಲಿ ದ್ವಿಚಕ್ರವಾಹನಗಳ ಕಿರಿಕಿರಿ, ರಾತ್ರಿ ಸಂಚಾರದಲ್ಲಿ ವಾಹನಗಳ ಎಲ್‌ಇಡಿ ಫೋಕಸ್ ಲೈಟ್ ಹಾವಳಿ, ಅಕ್ರಮ ಸಾರಾಯಿ ಮಾರಾಟ, ಸರ್ಕಾರಿ ಜಾಗ ಅತಿಕ್ರಮಣ, ಜೂಜಾಟ, ಕೌಟುಂಬಿಕ ಕಲಹ, ಅಧಿಕಾರಿಗಳಿಂದ ಲಂಚ ಸ್ವೀಕಾರ ಹಾಗೂ ಯೂಟ್ಯೂಬ್ ಚಾನೆಲ್‌ನ ವರದಿಗಾರರು ಮಹಿಳೆಗೆ ಬೆದರಿಕೆಯೊಡ್ಡಿದ ಕುರಿತು ಬಂದ ಕರೆಗಳಿಗೆ ತ್ವರಿತವಾಗಿ ಸ್ಪಂದಿಸಿದರು. ಒಂದೆಡೆ ಫೋನ್‌ನಲ್ಲಿ ಕರೆಗಳಿಗೆ ಪ್ರತಿಕ್ರಿಯಿಸುತ್ತ್ತಲೇ, ಆಯಾ ಕರೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲೆಡೆ ಖಾಕಿ ಪಡೆ ಕರೆ ಮಾಡಿದವರ ದೂರು ಪಡೆದು, ಕಾನೂನು ಕ್ರಮ ಜರುಗಿಸುವಂತೆ ಎಸ್ಪಿ ಡಾ.ಸಂಜೀವ ಪಾಟೀಲ ಅವರು ನೋಡಿಕೊಂಡರು. ಅದಕ್ಕೆ ಪೂರಕವಾಗಿ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ, ಡಿವೈಎಸ್ಪಿ ವೀರೇಶ ದೊಡಮನಿ, ಸಿಪಿಐ ಬಿ.ಆರ್.ಗಡ್ಡೇಕರ್ ಸೇರಿದಂತೆ ಎಸ್ಪಿ ಕಚೇರಿ ಸಿಬ್ಬಂದಿ ಸಾಥ್ ನೀಡಿದರು.
    ೆನ್ ಇನ್ ಕಾರ್ಯಕ್ರಮದ ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿ ಎಸ್ಪಿ ಡಾ.ಸಂಜೀವ ಪಾಟೀಲ, ಕಳೆದ ಬಾರಿಯ ಕಾರ್ಯಕ್ರಮದಲ್ಲಿ ಕೇಳಿಬಂದ ದೂರುಗಳಿಗೆ ಸ್ಪಂದಿಸಿ, ಬಹುತೇಕ ಎಲ್ಲದಕ್ಕೂ ಪರಿಹಾರ ಒದಗಿಸಲಾಗಿದೆ. ಈ ಬಾರಿಯ ದೂರುಗಳಿಗೂ ಸ್ಪಂದಿಸಿ, ಕೆಲವೇ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts