More

    ನಾಳೆ ಓಂಕಾರ ಸಿದ್ದೇಶ್ವರ ಜಾತ್ರೆ

    ಗುಂಡ್ಲುಪೇಟೆ : ತಾಲೂಕಿನ ಯಡವನಹಳ್ಳಿ ಸಮೀಪದ ಓಂಕಾರ ಸಿದ್ದೇಶ್ವರ ಜಾತ್ರೆ ಫೆ.19ರಂದು ಜರುಗಲಿದ್ದು, ಸುತ್ತಮುತ್ತಲಿನ 33 ಹಳ್ಳಿಗಳಲ್ಲಿ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

    ಪ್ರತಿ ವರ್ಷವೂ ಫೆಬ್ರವರಿ ಮೂರನೇ ಸೋಮವಾರ ಜಾತ್ರೆ ನಡೆಯುತ್ತದೆ. 500 ವರ್ಷಗಳ ಇತಿಹಾಸವಿರುವ ಈ ಜಾತ್ರೆಯನ್ನು ಗುಂಡ್ಲುಪೇಟೆ ಹಾಗೂ ನಂಜನಗೂಡು ತಾಲೂಕಿನ 33 ಗ್ರಾಮಗಳ ಜನರು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾ ಬಂದಿದ್ದಾರೆ.

    ಈಗಾಗಲೇ ತಾಲೂಕಿನ ಯಡವನಹಳ್ಳಿ, ಚೆನ್ನವಡೆಯನಪುರ, ಹೊರೆಯಾಲ, ರಂಗೂಪುರ, ಬೆಳಚಲವಾಡಿ, ಕೋಟೆಕೆರೆ ಗ್ರಾಮದವರು ತಮ್ಮ ತಮ್ಮ ಊರುಗಳ ತೇರುಗಳನ್ನು ಜಾತ್ರೆಗೆ ಕೊಂಡೊಯ್ಯಲು ಸಿದ್ಧಪಡಿಸುತ್ತಿದ್ದಾರೆ. ನಂಜನಗೂಡು ತಾಲೂಕಿನ ಹಲ್ಲರೆ, ಹೊಸಪುರ ಗ್ರಾಮದವರು ಅಲ್ಲೇ ತೇರುಕಟ್ಟಿ ಜಾತ್ರೆ ನಂತರ ಬಿಚ್ಚಿಡುತ್ತಾರೆ. ಅರೇಪುರ ಕೂಗಲೂರು, ಕೃಷ್ಣಾಪುರಗಳಿಂದ ದೇವರ ವಾಹನಗಳನ್ನು ಹೊತ್ತು ತರುತ್ತಾರೆ. ಇದಕ್ಕಾಗಿ ಎಲ್ಲ ಗ್ರಾಮಗಳಲ್ಲಿಯೂ ತೇರು ಕಟ್ಟುವ ವಾಹನಗಳನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ.

    ಬಿಗಿ ಬಂದೋಬಸ್ತ್: ಎರಡೂ ತಾಲೂಕುಗಳ 33 ಗ್ರಾಮಗಳ ಸಾವಿರಾರು ಜನರು ಪಾಲ್ಗೊಳ್ಳುವ ಜಾತ್ರೆಯನ್ನು ಶಾಂತಿಯುತವಾಗಿ ನಡೆಸಲು ಬೇಗೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಜಾತ್ರೆಗೆ ಬರುವ ಭಕ್ತರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಪ್ರತ್ಯೇಕ ಸ್ಥಳ ಗುರುತಿಸಿ ಬಂದೋಬಸ್ತ್‌ಗಾಗಿ ಹೆಚ್ಚುವರಿಯಾಗಿ 100 ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts