More

    ನರ್ಸ್​ಗಳು ನಿಜವಾದ ಯೋಧರು

    ಮರಿದೇವ ಹೂಗಾರ ಹುಬ್ಬಳ್ಳಿ

    ಕರೊನಾ ಸೋಂಕಿತರು ಇದ್ದಾರೆ ಎಂದರೆ ಆ ಓಣಿ, ಊರು ಎಲ್ಲ ಗಡಗಡ. ಜಿಲ್ಲಾಡಳಿತ, ಪೊಲೀಸರು ಲಾಕ್​ಡೌನ್ ಬಿಗಿ ಮಾಡುತ್ತವೆ. ಹಾಗಿದ್ದರೆ, ಕರೊನಾ ಸೋಂಕಿತರಿಗೆ ನೆರವು ನೀಡá-ವ, ಧೈರ್ಯ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುವ ಶುಶ್ರೂಷಕರ ಕತೆ ಏನಾಗಿರಬೇಡ…

    ಹೌದು, ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಕಿಮ್್ಸ) ಶುಶ್ರೂಷಕರು ಹಗಲು ರಾತ್ರಿ ಸೋಂಕಿತರು ಹಾಗೂ ಶಂಕಿತರ ಸೇವೆಯಲ್ಲಿ ತೊಡಗಿದ್ದಾರೆ. ಇವರೇ ನಿಜವಾದ ‘ಕರೊನಾ ಯೋಧರು’ ಎಂದು ಕಿಮ್್ಸ ಆಡಳಿತ ಮಂಡಳಿಯೂ ಹೆಮ್ಮೆ ವ್ಯಕ್ತಪಡಿಸುತ್ತದೆ. ಸೋಂಕಿತರು ಆಂಬುಲೆನ್ಸ್​ನಿಂದ ಇಳಿಯುತ್ತಿದ್ದಂತೆ ವೀಲ್​ಚೇರ್ ನೂಕುವುದರಿಂದ ಹಿಡಿದು, ಅವರಿಗೆ ಆಹಾರ, ಔಷಧ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವವರು ಅವರೇ. ತಮ್ಮ ಕುಟುಂಬವನ್ನೇ ದೂರ ಇಟ್ಟು ಸೋಂಕಿತರ ಬಳಿ ತೆರಳುತ್ತಾರೆ. ಅವರಿಗೆ ರೋಗಿಗಳ ಶುಶ್ರೂಷೆಯೇ ದೊಡ್ಡದು. ಆದರೆ, ಅವರಿಗೆ ಸೋಂಕು ತಗುಲಿದರೆ ಹೇಗೆಂಬ ಆತಂಕ ಕುಟುಂಬದ ಸದಸ್ಯರಿಗೆ ಇದ್ದೇ ಇರುತ್ತದೆ. ಆದಾಗ್ಯೂ ಕುಟುಂಬದೆಡೆಗಿನ ತುಡಿತವನ್ನು ಬದಿಗಿಟ್ಟು ಸೇವೆ ಮಾಡುವುದು ಸುಲಭದ ಮಾತಲ್ಲ.

    ಮೊದಲ ಕರೊನಾ ಸೋಂಕಿತ ವ್ಯಕ್ತಿ ಕಿಮ್ಸ್​ಗೆ ದಾಖಲಾದಾಗ ಹಿರಿಯ ವೈದ್ಯರೇ ಮುಂದಕ್ಕೆ ಹೋಗಲು ಧೈರ್ಯ ತೋರಿಸಿರಲಲ್ಲ. ಆದರೆ, ಶುಶ್ರೂಷಕರು ಆತಂಕ ಮೆಟ್ಟಿ ನಿಂತು, ದೇವರ ಮೇಲೆ ಭಾರ ಹಾಕಿ ಸೇವೆಗೆ ಮುಂದಾದರು. ಸದ್ಯ ಕಿಮ್ಸ್​ನಲ್ಲಿ ಮೂವರು ಮಕ್ಕಳು ಸೇರಿ ಐವರು ರೋಗಿಗಳಿದ್ದಾರೆ. ಅವರಿಗೆ ಕರೆದಾಗಲೆಲ್ಲ ಹೋಗಿ ಸಮಸ್ಯೆ ಏನೆಂದು ಮೊದಲು ಕೇಳುವವರೇ ಶುಶ್ರೂಷಕಿಯರು. ಒಂದು ರೀತಿಯಲ್ಲಿ ಅವರು ಜೀವದ ಹಂಗು ತೊರೆದು ಸೈನಿಕರಂತೆ ಹೋರಾಡುತ್ತಿದ್ದಾರೆ.

    ಪಿಪಿಇ ಕಿಟ್ ತೊಟ್ಟು ಪ್ರವೇಶ: ನಿತ್ಯ ಆರು ಶುಶ್ರೂಷಕರು ಸೋಂಕಿತರಿಗೆ ಶುಶ್ರೂಷೆ ಮಾಡುತ್ತಿದ್ದಾರೆ. ಅವರಿಗೆಲ್ಲ ಪರ್ಸನಲ್ ಪೊ›ಟೆಕ್ಷನ್ ಇಕ್ವಿಪ್​ವೆುಂಟ್ (ಪಿಪಿಇ) ಕಿಟ್​ಗಳನ್ನು ನೀಡಲಾಗಿದೆ. ವಾರ್ಡ್​ನ ಹೊರಗಡೆ ಕೆಲಸ ಮಾಡುವವರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ.

    ಕರ್ತವ್ಯ ನಿರ್ವಹಿಸಿದವರು ಇವರು: ಕಮಲಾ, ಬಿ. ಹನ್ನಪಾಲ(ಉಸ್ತುವಾರಿಗಳು), ಪ್ರಿಯಾ, ಮಾರಿಯಮ್ಮ, ಸುವರ್ಣ ಆರ್., ರೀಟಾ ನಾಯಕ್, ಮಂಜುಳಾ ಎಚ್., ಶ್ವೇತಾ, ಪ್ರಿಯಾಂಕ, ಶ್ರುತಿ ವಿ., ಸುಮನ, ಗಂಗಾ ಇವರು ಮೊದಲ ಕರೊನಾ ಸೋಂಕಿತನ ಆರೋಗ್ಯ ಸುಧಾರಣೆಯಲ್ಲಿ ವೈದ್ಯರೊಂದಿಗೆ ನಿರಂತರ ಕಾರ್ಯ ನಿರ್ವಹಿಸಿದ್ದಾರೆ.

    ನಿಜವಾದ ವಾರಿಯರ್ಸ್ ಅಂದರೆ ಶುಶ್ರೂಷಕರು ಹಾಗೂ ಗ್ರುಪ್ ಡಿ ಸಿಬ್ಬಂದಿ. ತಮ್ಮ ಕುಟುಂಬ ಮರೆತು ಸೋಂಕಿತರ ಸೇವೆಯಲ್ಲಿ ತೊಡಗಿದ್ದಾರೆ. ಅವರ ಸೇವೆಯ ಬಗ್ಗೆ ಹೆಮ್ಮೆ ಇದೆ.
    | ಡಾ. ರಾಮಲಿಂಗಪ್ಪ ಕಿಮ್್ಸ ನಿರ್ದೇಶಕ

    ಸರತಿ ಆಧಾರದಲ್ಲಿ ಶುಶ್ರೂಷಕರು ಸೇವೆ ಸಲ್ಲಿಸುತ್ತಿದ್ದೇವೆ. ನಮಗೂ ಆಗಾಗ ಆತಂಕ ಉಂಟಾಗುತ್ತದೆ. ಆದರೆ, ಸೇವೆಗೆ ಮೊದಲ ಆದ್ಯತೆ ನೀಡುವುದು ನಮ್ಮ ಕರ್ತವ್ಯ.
    | ಸುನೀತಾ ನಾಯ್್ಕ
    ಕಿಮ್್ಸ ಕೋವಿಡ್ 19 ವಾರ್ಡ್ ಸೂಪರ್​ವೈಜರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts