More

    ನರೇಗಾ ಯೋಜನೆಯಡಿ ಗ್ರಾಮೀಣಾಭಿವೃದ್ಧಿ: ಸಂಸದ ಎಸ್.ಮುನಿಸ್ವಾಮಿ ಹೇಳಿಕೆ, ಗ್ರಾಪಂ ಕಟ್ಟಡ ಉದ್ಘಾಟನೆ

    ಲಕ್ಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನರೇಗಾ ಯೋಜನೆಗೆ ಹೆಚ್ಚಿನ ಅನುದಾನ ನೀಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಂಡಿವೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ಲಕ್ಕೂರು ಹೋಬಳಿ ಡಿ.ಎನ್.ದೊಡ್ಡಿ ಗ್ರಾಮದಲ್ಲಿ ಶುಕ್ರವಾರ ನರೇಗಾ ಯೋಜನೆಯಡಿ 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಪಂ ಕಟ್ಟಡ ಉದ್ಘಾಟಿಸಿ ವಾತನಾಡಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಲಭ್ಯ ವಂಚಿತ ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಯೋಜನೆ ಪೂರಕವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ನರೇಗಾ ಯೋಜನೆಗೆ 50 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೂ ಅನುದಾನ ನೀಡುತ್ತಿದೆ ಎಂದರು.
    ಲಕ್ಕೂರು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಯ ಬಗ್ಗೆ ಸಚಿವ ಮುನಿರತ್ನ ಅವರ ಬಳಿ ಚರ್ಚಿಸಲಾಗಿದೆ. ಪ್ರಸ್ತುತ ಅಧಿವೇಶನ ನಡೆಯುತ್ತಿರುವುದರಿಂದ ಸಚಿವರು ಕಾರ್ಯಕ್ರಮಕ್ಕೆ ಬಂದಿಲ್ಲ. ಏ.8ರ ನಂತರ ಸಚಿವರು, ಶಾಸಕರು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಕಾಮಗಾರಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲಾಗುವುದು ಎಂದರು.

    ಶಾಸಕ ಕೆ.ವೈ.ನಂಜೇಗೌಡ ವಾತನಾಡಿ, ಗಡಿಭಾಗದ ಡಿ.ಎನ್.ದೊಡ್ಡಿ ಹಾಗೂ ದಿನ್ನಹಳ್ಳಿ ಗ್ರಾಪಂ ಅಭಿವೃದ್ಧಿ ವಂಚಿತವಾಗಿದ್ದು, ಸರ್ಕಾರಿ ಜಾಗದ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ತಹಸೀಲ್ದಾರ್ ಗಮನಹರಿಸಿ ಸರ್ಕಾರಿ ಜಾಗವನ್ನು ಗ್ರಾಪಂ ಅಧೀನಕ್ಕೆ ಒಳಪಡಿಸಿ ಮಳಿಗೆ ನಿರ್ಮಿಸಿ ಬಾಡಿಗೆಗೆ ನೀಡುವುದರಿಂದ ಗ್ರಾಪಂಗೆ ಆದಾಯ ಹೆಚ್ಚಲಿದೆ. ಟೇಕಲ್ ಭಾಗದಲ್ಲಿ 38 ಎಕರೆ ಸರ್ಕಾರಿ ಜಮೀನನ್ನು ವಿವಿಧ ಇಲಾಖೆಗಳ ನಿರ್ವಾಣಕ್ಕೆ ನೀಡಲಾಗಿದೆ. ಪಕ್ಷ ಭೇಧ ಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಿ ಎಂದರು.

    ಗ್ರಾಪಂ ಅಧ್ಯಕ್ಷ ಚಿಕ್ಕತಿಮ್ಮರಾಯಪ್ಪ, ಉಪಾಧ್ಯಕ್ಷೆ ರಾಧಾ, ಗ್ರಾಪಂ ಸದಸ್ಯರಾದ ನಾರಾಯಣಪ್ಪ, ಶ್ರೀನಾಥ್, ಪಾಲೇಶ್‌ರೆಡ್ಡಿ, ಶಶಿಕಲಾ, ಸಂಪಂಗೆರೆ ರು, ಭೂ ನ್ಯಾಯಮಂಡಳಿ ಸದಸ್ಯ ಅಗ್ರಿ ನಾರಾಯಣಪ್ಪ, ಮುಖಂಡರಾದ ಸಿ.ಲಕ್ಷ್ಮೀನಾರಾಯಣ್, ಸಂತೇಹಳ್ಳಿ ನಾರಾಯಣಸ್ವಾಮಿ, ಅಶ್ವತ್ಥರೆಡ್ಡಿ, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಬಿ.ಆರ್.ವೆಂಕಟೇಶ್, ನಾಗಾಪುರ ನವೀನ್, ಪಿಡಿಒ ಲೋಕೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts