More

    ಪಿನಾಕಿನಿ ನದಿಗೆ ಹಾರಿ ವಿದ್ಯಾರ್ಥಿನಿಯರು ಆತ್ಮಹತ್ಯೆ; ಮತ್ತೊಬ್ಬಳ ದೇಹಕ್ಕಾಗಿ ಶೋಧ

    ಲಕ್ಕೂರು: ಕಾಲೇಜು ಮುಗಿಸಿಕೊಂಡು ಮನೆಗೆ ಹಿಂತಿರುಗಬೇಕಾದ ಇಬ್ಬರು ವಿದ್ಯಾರ್ಥಿನಿಯರು ಹೊಸಕೋಟೆ ತಾಲೂಕಿನ ಮುಗಳೂರು ಸಮೀಪ ಬೆಂಗಳೂರಿನ ಕೊಳಚೆ ನೀರು ಹರಿಯುವ ದಕ್ಷಿಣ ಪಿನಾಕಿನಿ ನದಿ ನೀರಿಗೆ ಮಂಗಳವಾರ ಜಿಗಿದಿದ್ದಾರೆ ಎನ್ನಲಾಗಿದ್ದು ಒಬ್ಬಳ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬಳ ಪತ್ತೆಗೆ ಕಾರ್ಯಚರಣೆ ನಡೆಯುತ್ತಿದೆ.
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬಾಗೂರು ಗ್ರಾಮದ ಆರ್.ರಾಜೇಶ್ವರಿ ಹಾಗೂ ಲಕ್ಕೂರು ಗ್ರಾಪಂ ವ್ಯಾಪ್ತಿಯ ಕೊಡೂರು ಗ್ರಾಮದ ಎಂ.ಸುಪ್ರಿಯ ನದಿಗೆ ಜಿಗಿದವರು ಎನ್ನಲಾಗಿದೆ.
    ಸುಪ್ರಿಯ ರಾಜೇಶ್ವರಿ ಜತೆಯಲ್ಲಿ ತೆರಳಿದ್ದು, ಆಕೆಯ ಸುಳಿವು ಸಿಕ್ಕಿಲ್ಲ. ಆಕೆಯೂ ನದಿಗೆ ಜಿಗಿದಳೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಲಕ್ಕೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ಕಲಾ ವಿಭಾಗದಲ್ಲಿ ಇಬ್ಬರೂ ಓದುತ್ತಿದ್ದರು. ಎಂದಿನಂತೆ ಮಂಗಳವಾರ ಬೆಳಗ್ಗೆ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಸಂಜೆ ಕಾಲೇಜು ಮುಗಿದ ನಂತರ ಮನೆಗೆ ತೆರಳುವ ಬದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮುಗಳೂರು ಸಮೀಪ ಹರಿಯುವ ದಕ್ಷಿಣ ಪಿನಾಕಿನಿ ನದಿಯತ್ತ ಸಾಗಿದ್ದಾರೆ.

    ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದ ಎಂ.ಸುಪ್ರಿಯಾ ಹಾಗೂ ಆರ್.ರಾಜೇಶ್ವರಿ ಪ್ರತಿಭಾವಂತರಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮುಗಳೂರು ಬೇಕರಿಯಲ್ಲಿ ತಿಂಡಿಗಳನ್ನು ತೆಗೆದುಕೊಂಡು ನದಿಯ ಕಡೆ ಹೊರಟ ಇಬ್ಬರಲ್ಲಿ ಎಂ.ಸುಪ್ರಿಯಾ ಆತ್ಮಹತ್ಯೆ ಮಾಡಿಕೊಳ್ಳುವ ಪತ್ರವನ್ನು ಮೊದಲೇ ಬರೆದು ಕಾಲೇಜಿನಲ್ಲಿ ಎಸೆದಿದ್ದಳು. ‘ನಮ್ಮ ಮನೆಯಲ್ಲಿ ನಮ್ಮ ಮದುವೆಗೆ ಒಪ್ಪುವುದಿಲ್ಲ. ಅದಕ್ಕೆ ನೀನು ಬೇರೆ ಯಾರನ್ನಾದರೂ ಮದುವೆಯಾಗಿ ಚೆನ್ನಾಗಿರು, ನನ್ನ ಮರೆತು ಬಿಡು. ಸಾರಿ, ನನ್ನ ಮರೆಯೋಕೆ ಆಗಲ್ಲ ಅಂತ ಗೊತ್ತು, ಆದರೆ ನಾನು ಏನ್ ಮಾಡ್ಲಿ ಅದಕ್ಕೆ ಸಾರಿ ಚಿನ್ನು’ ಎಂದು ಬರೆದಿರುವ ಪತ್ರವು ಸಿಕ್ಕಿದೆ. ಅಲ್ಲದೆ, ವಿದ್ಯಾರ್ಥಿನಿಯ ತಮ್ಮ ಹಾಗೂ ತಾಯಿಯ ಫೋಟೋಗಳನ್ನು ಹರಿದು ಹಾಕಿದ್ದಾಳೆ.

    ಕಾರ್ಯಚರಣೆ: ಬೇಕರಿಯಲ್ಲಿ ತಿಂಡಿ ತೆಗೆದುಕೊಂಡು ನದಿ ಕಡೆ ಹೊರಟ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸ್ಥಳೀಯರ ಮಾಹಿತಿ ಮೇರೆಗೆ ಅನುಗೊಂಡನಹಳ್ಳಿ ಠಾಣೆಯ ಪಿಎಸ್‌ಐ ಸಂಗಮೇಶ್ ಮೇಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಗ್ನಿಶಾಮಕ ತಂಡದವರನ್ನು ಕರೆಸಿ ಕಾರ್ಯಚರಣೆ ಮಾಡಿದರು. ಸಂಜೆ ವೇಳೆಗೆ ಆರ್.ರಾಜೇಶ್ವರಿ ಮೃತದೇಹ ಪತ್ತೆಯಾಗಿದೆ. ನಂತರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮತ್ತೊಬ್ಬ ವಿದ್ಯಾರ್ಥಿನಿ ಎಂ.ಸುಪ್ರಿಯಾ ಪತ್ತೆಯಾಗಿಲ್ಲ. ಮಂಗಳವಾರ ರಾತ್ರಿ 9 ಗಂಟೆಯವರೆಗೂ ಕಾರ್ಯಚರಣೆ ಮಾಡಿದರೂ ಸಿಕ್ಕಿಲ್ಲ. ಬುಧವಾರ ಬೆಳಗ್ಗೆ 20ಕ್ಕೂ ಹೆಚ್ಚು ಮಂದಿ ಕಾರ್ಯಚರಣೆಯಲ್ಲಿದ್ದು, ಸಂಜೆಯವರೆಗೂ ಸುಳಿವು ಸಿಕ್ಕಿಲ್ಲ.

    ಕಾಲೇಜಿಗೆ ಶಾಸಕ ಭೇಟಿ:

    ಘಟನೆ ಬಗ್ಗೆ ಮಾಹಿತಿ ತಿಳಿದ ಶಾಸಕರು ಬುಧವಾರ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸರೆಡ್ಡಿ ಮಾಹಿತಿ ಪಡೆದರು. ಕಾಲೇಜಿನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತದ ಸಂಗತಿ. ಈ ಬಗ್ಗೆ ಪೊಲೀಸರೊಂದಿಗೆ ಮಾತನಾಡಿ, ಆತ್ಮಹತ್ಯೆ ಬಗ್ಗೆ ಸೂಕ್ತ ತನಿಖೆ ನಂತರ ನಿಖರ ಮಾಹಿತಿ ಪಡೆಯಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts