More

    ನರಗುಂದದಲ್ಲಿ ಮತ್ತೆ ಭೂಕುಸಿತ

    ನರಗುಂದ: ಕಳೆದೆರಡು ತಿಂಗಳ ಹಿಂದೆ ಪಟ್ಟಣದ ವಿವಿಧ ಬಡಾವಣೆಗಳ ಜನರನ್ನು ಬೆಚ್ಚಿಬೀಳಿಸಿದ್ದ ಪದೇಪದೆ ಭೂಕುಸಿತ ಪ್ರಕರಣಗಳು ಮಾಸುವ ಮುನ್ನವೇ ಶುಕ್ರವಾರ ಮತ್ತೆ ಸಂಭವಿಸಿದೆ. ಪಟ್ಟಣದ ದಂಡಾಪೂರ ಹಗೇದಕಟ್ಟಿ ಬಡಾವಣೆಯ ಇಮಾಮಸಾಬ್ ತಹಸೀಲ್ದಾರ ಎಂಬುವರ ಮನೆ ಮುಂದಿನ ಕಾಂಕ್ರೀಟ್ ರಸ್ತೆಯಲ್ಲಿಯೇ ಈ ಭೂಕುಸಿತ ಸಂಭವಿಸಿದೆ. ಇದರಿಂದ ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಬಡಾವಣೆಯಲ್ಲಿನ ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ಭೂಮಿಯಲ್ಲಿರುವ ಆಳವಾದ ಗುಂಡಿಗೆ ರಭಸವಾಗಿ ಬೀಳುವ ವಿಚಿತ್ರ ಶಬ್ದ ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾಂಕ್ರೀಟ್ ರಸ್ತೆಯಲ್ಲಿ ಬಿದ್ದ ಗುಂಡಿಗೆ ಹಾಸಿಗಲ್ಲನ್ನಿಟ್ಟು ಯಾವುದೇ ವಾಹನ ಹಾಗೂ ಸಾರ್ವಜನಿಕರು ಸಂಚರಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಗುಂಡಿ ಅದಾಜು 40 ಅಡಿ ಆಳ, 15 ಅಡಿ ಅಗಲವಾಗಿದೆ.

    ಕಳೆದೆರಡು ತಿಂಗಳ ಹಿಂದೆ ಈ ಬಡಾವಣೆಯೊಂದರಲ್ಲಿಯೇ ಸುಮಾರು 30ಕ್ಕೂ ಅಧಿಕ ಭೂಕುಸಿತಗಳು ಸಂಭವಿಸಿವೆ. ಸದ್ಯಕಂತೂ ಭೂಕುಸಿತ ಪ್ರಕರಣಗಳು ನಿಲ್ಲವಂತೆ ಕಾಣುತ್ತಿಲ್ಲ. ನರದುಂದ ನಿವಾಸಿಗಳು ಯಾವಾಗ ಭೂಕುಸಿತ ಸಂಭವಿಸುತ್ತದೆಯೋ ಎನ್ನುವ ಭಯದಲ್ಲಿ ಬದುಕುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts