More

    ದಂಡಾಪೂರ ಪಿಎಸಿಎಸ್ ಅಧ್ಯಕ್ಷರಾಗಿ ಪ್ರಕಾಶ ಆಯ್ಕೆ

    ನರಗುಂದ: ಪಟ್ಟಣದ ದಂಡಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಎಸಿಎಸ್)ದ ನೂತನ ಅಧ್ಯಕ್ಷರಾಗಿ ಪ್ರಕಾಶ ಪಟ್ಟಣಶೆಟ್ಟಿ, ಉಪಾಧ್ಯಕ್ಷರಾಗಿ ವಿಠ್ಠಲರಾವ್ ಭೀಮರಾವ್ ಜಾಧವ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

    ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪ್ರಕಾಶ ಪಟ್ಟಣಶೆಟ್ಟಿ ಅವರಿಗೆ ಗದಿಗೆಪ್ಪ ಸವದತ್ತಿ ಸೂಚಕರಾಗಿ, ಮಂಜು ಮಡಿವಾಳರ ಅನುಮೋದಕರಾಗಿ, ಉಪಾಧ್ಯಕ್ಷ ವಿಠ್ಠಲರಾವ್ ಜಾಧವ ಅವರಿಗೆ ಸೂಚಕರಾಗಿ ರಾಜಾರಾಮ ಮುಳಿಕ, ಅನುಮೋದಕರಾಗಿ ಯಲ್ಲಪ್ಪ ಭಜಂತ್ರಿ ಕಾರ್ಯ ನಿರ್ವಹಿಸಿದರು. ಚುನಾವಣೆ ಅಧಿಕಾರಿ ಆರ್.ಎಸ್. ಗಡ್ಡಿ ಅವರು ಅವಿರೋಧ ಆಯ್ಕೆ ಘೋಷಿಸಿ ಸನ್ಮಾನಿಸಿದರು.

    ಸಂಘದ ನೂತನ ನಿರ್ದೇಶಕ ಮಂಡಳಿ ಸದಸ್ಯರನ್ನೂ ಆಯ್ಕೆ ಮಾಡಲಾಗಿದೆ. ಸಾಮಾನ್ಯ ಕ್ಷೇತ್ರದಿಂದ ಮಂಜು ಸಂಗಪ್ಪ ಮಡಿವಾಳರ, ರಾಜಾರಾಮ ವಸಂತ ಮುಳಿಕ, ಹನುಮಂತಪ್ಪ ಸಿದ್ದಪ್ಪ ಶಿಂಧೆ, ಪ್ರಕಾಶ ಗುರುಪಾದಪ್ಪ ಪಟ್ಟಣಶೆಟ್ಟಿ. ಮಹಿಳಾ ಕ್ಷೇತ್ರದಿಂದ ಯಲ್ಲವ್ವ ಫಕೀರಪ್ಪ ದೊಡಮನಿ, ಹನುಮವ್ವ ಶಿವಪುತ್ರಪ್ಪ ಮುಳ್ಳೂರ, ಹಿಂದುಳಿದ ಅ ವರ್ಗದಿಂದ ಗದಿಗೆಪ್ಪ ಸಿದ್ದಪ್ಪ ಸವದತ್ತಿ, ಹಿಂ. ಬ ವರ್ಗದಿಂದ ವಿಠ್ಠಲರಾವ್ ಭೀಮರಾವ್ ಜಾಧವ, ಪರಿಶಿಷ್ಟ ಜಾತಿ-ಯಲ್ಲಪ್ಪ ಹನುಮಂತಪ್ಪ ಭಜಂತ್ರಿ, ಬಿನ್ ಸಾಲಗಾರ ಕ್ಷೇತ್ರ-ಶಿವಾಜಿ ನಾರಾಯಣ ಪಾಟೀಲ, ಸಾಲಗಾರ ಸಾಮಾನ್ಯ ಕ್ಷೇತ್ರಕ್ಕೆ ನಾಲ್ವರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಪಟ್ಟಣದ ಶ್ರೀಉಡಚಾ ಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಸಂಘ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು. ‘ ಸಂಘದಿಂದ ರೈತರಿಗೆ ಕೃಷಿ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ನೂತನ ಅಧ್ಯಕ್ಷ-ಉಪಾಧ್ಯಕ್ಷ ತಿಳಿಸಿದರು.

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts