More

    ಸಿರಿಗೇರಿಯಲ್ಲಿ ಐದೇ ತಿಂಗಳಲ್ಲಿ ಕಿತ್ತು ಹೋದ ಸಿಸಿ ರಸ್ತೆ

    ಸಿರಿಗೇರಿ: ಗ್ರಾಮದ 6ನೇ ವಾರ್ಡ್‌ನ ಸಿಸಿ ಕಿತ್ತು ಹೋಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸಿಸಿ ರಸ್ತೆ ನಿರ್ಮಿಸಿ ಕೆಲ ತಿಂಗಳಲ್ಲಿ ದುರಸ್ತಿಗೆ ಬಂದಿದ್ದು, ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ತಿಂಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಶಾಸಕರ ಸೂಚನೆ

    ಐದು ತಿಂಗಳ ಹಿಂದೆ ಸಿಸಿ ರಸ್ತೆಯನ್ನು 5ನೇ ಹಣಕಾಸಿನಲ್ಲಿ 8 ಇಂಚಿನ ಪ್ಲಾಸ್ಟಿಕ್ ಪೈಪ್‌ನ ಒಳಚರಂಡಿ ವ್ಯವಸ್ಥೆಯೊಂದಿಗೆ ನಿರ್ಮಿಸಲಾಗಿತ್ತು. 1.50 ಲಕ್ಷ ರೂ. ಕಾಮಗಾರಿಗೆ ವೆಚ್ಚ ತಗುಲಿತ್ತು. ಈಗ ಸಿಸಿ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.

    ಚೇಂಬರ್‌ನಿಂದ ಚರಂಡಿ ನೀರು ಹೊರಗಡೆ ಬರುತ್ತಿದ್ದು, ಗಬ್ಬುನಾರುತ್ತಿದೆ. ಸಾರ್ವಜನಿಕರು, ವೃದ್ಧರು, ಮಹಿಳೆಯರು ಮೂಗು ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ಬಂದೊದಗಿದೆ.

    ಸಿಸಿ ಕಿತ್ತು ಹೋಗಿದ್ದರಿಂದ ತಗ್ಗು-ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಚರಂಡಿ ಕೊಳಚೆ ನೀರು ಸಂಗ್ರಹವಾಗಿ ದುರ್ನಾತ ಜತೆಗೆ ವಾಹನ ಸವಾರರು ಓಡಾಟದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿ ಓಡಾಡುವಂತಾಗಿದೆ.

    ಒಂದು ವಾರದಲ್ಲಿ ಸಮಸ್ಯೆ ಪರಿಹರಿಸಲಾಗುವುದು. ಪ್ರಾರಂಭದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸಾರ್ವಜನಿಕರು ಸಹಕರಿಸದೆ ದ್ವಿಚಕ್ರ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ಓಡಾಡಿದರು. ಹೀಗಾಗಿ ಸಿಸಿ ರಸ್ತೆ ಹಾಳಾಗಿದ್ದು, ಪಿಡಿಒ ಗಮನಕ್ಕೆ ತಂದು ಸರಿಪಡಿಸಲಾಗುವುದು.
    | ಪೂಜಾರಿ ಸಿದ್ದಯ್ಯ, ಗ್ರಾಪಂ ಸದಸ್ಯ, ಸಿರಿಗೇರಿ

    ಸಮಸ್ಯೆ ಬಗ್ಗೆ 6ನೇ ವಾರ್ಡ್‌ನ ಗ್ರಾಪಂ ಸದಸ್ಯರ ಬಳಿ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ರಸ್ತೆ ಸರಿಪಡಿಸಲಾಗುವುದು.
    | ಉಪ್ಪಾರ ರಾಮಪ್ಪ, ಪಿಡಿಒ, ಸಿರಿಗೇರಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts