More

    ನಮ್ಮಲ್ಲಿಲ್ಲ ಕೋಮು ಗಲಭೆಗೆ ಅವಕಾಶ

    ಹುಲಸೂರು: ನಾವೆಲ್ಲರೂ ಸೋದರರಂತೆ ಅನ್ಯೋನ್ಯವಾಗಿದ್ದು, ಹುಲಸೂರು ಸೇರಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕೋಮು ಗಲಭೆಗಳಿಗೆ ಅವಕಾಶ ನೀಡದೆ ಒಂದೇ ಎಂಬ ಸಂದೇಶ ಸಾರುತ್ತಿರುವುದಾಗಿ ಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

    ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಹಜರತ್ ಖಾಸೀಂ ಅಲಿ ಷಾ 60ನೇ ಉರುಸ್ ನಿಮಿತ್ತ ಏರ್ಪಡಿಸಿದ್ದ ಧಾಮರ್ಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ನಾವು ಯಾವ ಕಾರ್ಯಕ್ರಮ ಮಾಡಿದರೂ ಮುಸ್ಲಿಂ ಸಮಾಜದವರನ್ನು ಆಹ್ವಾನಿಸುತ್ತೇವೆ. ಅದೇ ರೀತಿ ಅವರ ಧಾಮರ್ಿಕ ಕಾರ್ಯಕ್ರಮಗಳಿಗೂ ಮಠಾಧೀಶರನ್ನು ಆಹ್ವಾನಿಸುತ್ತಾರೆ ಎಂದರು.
    ಹೈದರಾಬಾದ್ನ ಮುಸ್ಲಿಂ ಧರ್ಮಗುರು ಹಜರತ್ ಅನ್ವರುಲ್ಲಾ ಹುಸೇನಿ ಚಿಸ್ತಿ ಖಾದ್ರಿ ಮಾತನಾಡಿ, ಭಾರತದಲ್ಲಿ ಎಲ್ಲ ಸಮುದಾಯದ ಜನರು ಸುಖವಾಗಿರಲು ಸೂಫಿ-ಸಂತರು, ಮಹಾತ್ಮರು, ಸ್ವಾಮೀಜಿಗಳ ಆಶೀವರ್ಾದವೇ ಕಾರಣ ಎಂದರು.

    ಶಾಸಕ ಶರಣು ಸಲಗರ ಮಾತನಾಡಿ, ಭವ್ಯ ಭಾರತ ಇದಾಗಿದೆ. ಎಲ್ಲ ಧಮರ್ೀಯರು ಒಮ್ಮನಸ್ಸಿನಿಂದ ಬಾಳುತ್ತಿರುವುದು ಸಂತಸದ ವಿಷಯ. ಹಜರತ್ ಖಾಸೀಂ ಅಲಿ ಷಾ ದಗರ್ಾದಲ್ಲಿ ನೆಲಹಾಸಿಗೆ (ಪಸರ್ಿ) ಕಾಮಗಾರಿ ಕೆಲವೇ ದಿನದಲ್ಲಿ ಮಾಡಿಸಿಡುವುದಾಗಿ ಭರವಸೆ ನೀಡಿದರು.

    ಧರ್ಮಗುರು ಮುಫ್ತಿ ಗುಲಾಂಸಾಬ್, ಮಾಜಿ ಎಂಎಲ್ಸಿ ವಿಜಯಸಿಂಗ್, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಶ್ರೀಮಂತರಾವ ಜಾನಬಾ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂಜುಕುಮಾರ ಭುಸಾರೆ, ಪ್ರಮುಖರಾದ ಸುಧೀರ ಕಾಡಾದಿ, ಮನ್ಸೂರ್ ದಾವಲಜಿ, ಓಂಕಾರ ಪಟ್ನೆ, ಸೈಯದ್ ಪೇಶಮಾಮ್, ಅಶೋಕ ವಕಾರೆ, ರಣಜೀತ್ ಗಾಯಕವಾಡ, ಅಜರ್ಅಲಿ ನವರಂಗ್, ಡಿಕೆ ದಾವೂದ್, ತ್ರಿಬಂಕರಾವ ಜೀವಾಯಿ, ನಿಜಾಮುದ್ದೀನ್ ಜಹಂಗೀರ್, ಹಕೀಂ ಮುಲ್ಲಾ, ಏಜಾಜ್ ಜಹಂಗೀರ್, ಅಬ್ದುಲ್ ಹಮೀದ್, ಖಿಜರ್ ಜಹಂಗೀರ್ ಇತರರಿದ್ದರು. ಜಿಲಾನಿ ಮುಲ್ಲಾ ನಿರೂಪಣೆ ಮಾಡಿದರು. ಮಳೆ ಮಧ್ಯೆಯೂ ಉರುಸ್ಗೆ ಚಾಲನೆ ನೀಡಲಾಯಿತು.

    ಎರಡು ವರ್ಷ ಕೋವಿಡ್ ಕಾರಣಕ್ಕೆ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಈಗ ಎಲ್ಲ ಧಮರ್ೀಯರು ಸೇರಿ ಕಾರ್ಯಕ್ರಮ ಮಾಡುತ್ತಿರುವುದು ಹರ್ಷ ತಂದಿದೆ. ಜನಸೇವೆಗೆ ನಾನು ಸದಾ ಸಿದ್ಧನಿದ್ದು, ಯಾವುದೇ ಕೆಲಸ ಕಾರ್ಯ ಇದ್ದರೂ ಧಾರಾಳವಾಗಿ ಸಂಪಕರ್ಿಸಬಹುದು.
    | ವಿಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts