More

    VIDEO| ರಾಜ್​ಘಾಟ್​ನಲ್ಲಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಡೊನಾಲ್ಡ್​ ಟ್ರಂಪ್​ ದಂಪತಿ

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಟ್​ ಟ್ರಂಪ್​ 2ನೇ ದಿನದ ಕಾರ್ಯಕ್ರಮ ಆರಂಭಿಸಿದ್ದು ಮಂಗಳವಾರ ಬೆಳಗ್ಗೆ ದಂಪತಿ ಸಮೇತ ರಾಜ್​ಘಾಟ್​ಗೆ ತೆರಳಿ ರಾಷ್ಟ್ರಪಿತ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು.

    ರಾಷ್ಟ್ರಪತಿ ಭವನದಿಂದ ನೇರವಾಗಿ ರಾಜ್​ಘಾಟ್​ಗೆ ಪತ್ನಿ ಮೆಲಾನಿಯ ಜತೆ ತಲುಪಿ ಗಾಂಧಿ ಸಮಾಧಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು. ನಂತರ ರಾಜ್​ಘಾಟ್​ ಉದ್ಯಾನದಲ್ಲಿ ತಮ್ಮ ಭೇಟಿಯ ಸ್ಮರಣೆಗಾಗಿ ಗಿಡ ನೆಡನೆಟ್ಟು ನೀರು ಹಾಕಿದರು.

    ಡೊನಾಲ್ಡ್​ ಟ್ರಂಪ್​ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನಿಸಿಕೆ ಬರೆದು ಸಹಿಹಾಕಿದರು. ಈ ವೇಳೆ ಗಾಂಧಿ ಟ್ರಸ್ಟ್​ ವತಿಯಿಂದ ಟ್ರಂಪ್​ಗೆ ಗಾಂಧೀಜಿ ಪುತ್ಥಳಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts