More

    ನನ್ನ ಹೇಳಿಕೆಗೆ ಈಗಲೂ ಬದ್ಧ ವಿಪ ಸದಸ್ಯ ಶಾಂತಾರಾಮ ಸಿದ್ದಿ

    ಯಲ್ಲಾಪುರ: ದೇಶದಲ್ಲಿ ಮತಾಂತರಗೊಂಡ ಯಾವುದೇ ಬುಡಕಟ್ಟು ಸಮುದಾಯದ ಜನರು ಅಲ್ಪಸಂಖ್ಯಾತ ಹಾಗೂ ಬುಡಕಟ್ಟು ಸಮುದಾಯ ಎರಡೂ ವಿಭಾಗಗಳ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಕೊಡಬಾರದೆಂಬ ಹೇಳಿಕೆಗೆ ನಾನು ಈಗಲೂ ಬದಟಛಿ. ನನ್ನ ಈ ಹೇಳಿಕೆಯನ್ನು ಕೆಲವರು ಸಿದ್ದಿ ಸಮುದಾಯಕ್ಕೆ ಸೀಮಿತಗೊಳಿಸಿ ತಪ್ಪು ಸಂದೇಶ ನೀಡುತ್ತಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಸ್ಪಷ್ಟಪಡಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನೈದು ದಿನಗಳ ಹಿಂದೆ ಈ ಕುರಿತು ಕಾರವಾರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜನಜಾತಿ ಸುರಕ್ಷಾ ಮಂಚ್, ಬುಡಕಟ್ಟು ಹಿತರಕ್ಷಣಾ ವೇದಿಕೆಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಲಾಗಿತ್ತು. ದೇಶದಲ್ಲಿನ ಬುಡಕಟ್ಟು ಜನಾಂಗದವರು ಮತಾಂತರ ಹೊಂದಿದರೆ ಅವರಿಗೆ ಅಲ್ಪ ಸಂಖ್ಯಾತ ಅಥವಾ ಬುಡಕಟ್ಟು ಸಮುದಾಯದ ಯಾವುದಾದರೂ ಒಂದೇ ಸೌಲಭ್ಯ ನೀಡಬೇಕು. ಎರಡೂ ಲಾಭ ಅವರು ಪಡೆಯುವಂತಾಗಬಾರದು ಎಂದು ಆಗ್ರಹಿಸಿದ್ದೇವು. ಸಿದ್ದಿ ಸಮುದಾಯ, ನಮ್ಮ ಜಿಲ್ಲೆಯವರು ಎಂದಾಗಲೀ ಸೀಮಿತಗೊಳಿಸಿ ಉಲ್ಲೇಖ ಮಾಡಿಲ್ಲ. ಹೀಗಿದ್ದಾಗಲೂ ಅದು ಸಿದ್ದಿ ಸಮುದಾಯದವರ ಸೌಲಭ್ಯಗಳನ್ನು ಕಿತ್ತುಕೊಳ್ಳಲು ಈ ಮನವಿ ಸಲ್ಲಿಸಲಾಗಿದೆ ಎಂಬ ವದಂತಿಯನ್ನು ಕೆಲವರು ಹಬ್ಬಿಸಿದ್ದಾರೆ. ಈ ಬಗೆಗೆ ಕೆಲವರು ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿದ್ದಿ ಸಮುದಾಯಕ್ಕೆ ನೀಡುತ್ತಿರುವ ಸೌಲಭ್ಯಗಳನ್ನು ತಪ್ಪಿಸುತ್ತೇನೆ ಎಂದು ನಾನು ಹೇಳಿಲ್ಲ. ಇಂತಹ ವದಂತಿಗಳಿಗೆ ಜನತೆ ಕಿವಿಗೊಡಬಾರದು. ಇಡೀ ಸಿದ್ದಿ ಸಮುದಾಯದವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಕೆಲವರು ಮಾತ್ರ ಸೇರಿಕೊಂಡು ಹೇಳುವುದು ಸರಿಯಲ್ಲ. ಸಿದ್ದಿ ಸಮುದಾಯದವರು ಹಿಂದು, ಕ್ರೈಸ್ತ, ಅಥವಾ ಮುಸ್ಲಿಂ ಆಗಿದ್ದರೂ ಹೆಸರಿನ ಕೊನೆಗೆ ಸಿದ್ದಿ ಎಂದು ಇದ್ದರೆ ಅವರು ಬುಡಕಟ್ಟು ಸಮುದಾಯದವರೇ ಆಗುತ್ತಾರೆ. ಹಾಗಾಗಿ ಅವರ ಸೌಲಭ್ಯ ಕಿತ್ತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

    ಸಿದ್ದಿ ಜನಜಾಗೃತಿ ಟ್ರಸ್ಟ್​ನ ಉಪಾಧ್ಯಕ್ಷ ಗೋಪಾಲ ಸಿದ್ದಿ, ಸಿದ್ದಿ ಜನಾಂಗದ ಪೌಷ್ಟಿಕ ಆಹಾರ ಸಮಿತಿಯ ಅಧ್ಯಕ್ಷ ಗಣಪತಿ ರಾಮಾ ಸಿದ್ದಿ, ಸಿದ್ದಿ ಸಮಾಜದ ಮುಖಂಡರಾದ ಅನಂತ ಸಿದ್ದಿ ನಂದೊಳ್ಳಿ , ರಾಜೇಶ್ವರಿ ಸಿದ್ದಿ, ಮಂಜುನಾಥ ಸಿದ್ದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts