More

    ನದಿಯಲ್ಲಿ ಸಿಲುಕಿದವರ ರಕ್ಷಣೆ

    ಸೇಡಂ: ಬಿಬ್ಬಳ್ಳಿ-ಕಾಚೂರ ಮಧ್ಯೆ ಕಾಗಿಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ 8 ಯುವ ಕೃಷಿಕರನ್ನು ಪ್ರಾಣದ ಹಂಗು ತೊರೆದು ಮೀನುಗಾರರು ಶನಿವಾರ ರಕ್ಷಿಸಿದ್ದಾರೆ.
    ಶ್ರೀಮಂತ ರಾಯಪ್ಪ, ಸಿದ್ದಪ್ಪ ರಾಯಪ್ಪ, ಅಖಿಲೇಶ ಸತೀಶ, ಅರುಣ ಪೂಜಾರಿ, ರಾಜಪ್ಪ ಬಸವರಾಜ, ಸಂತೋಷ ರಾಜಪ್ಪ, ಚಂದ್ರಪ್ಪ ರಾಯಪ್ಪ, ಶಂಕ್ರಪ್ಪ ನಾಗಪ್ಪ ಅವರು ತಮ್ಮ ಜಮೀನುಗಳಿಗೆ ತೆರಳಲು ನದಿಗೆ ಇಳಿದಿದ್ದಾರೆ. ಆದರೆ ನದಿ ಪಾತ್ರದಲ್ಲಿ ಭಾರಿ ಮಳೆಯಾಗಿದ್ದರಿಂದ ದಿಢೀರ್ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಅರ್ಧ ನದಿ ದಾಟಿರುವಷ್ಟರಲ್ಲಿ ಸುತ್ತಲೂ ನೀರು ಆವರಿಸಿದೆ. ಹೆಚ್ಚಿನ ಪ್ರಮಾಣದ ನೀರು ಇರುವುದರಿಂದ ಕೂಡಲೇ ಗ್ರಾಮಸ್ಥರಿಗೆ ಪೋನ್ ಮೂಲಕ ಮಾಹಿತಿ ನೀಡಿದ್ದಾರೆ.
    ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಮೀನುಗಾರರು ಸ್ಥಳಕ್ಕೆ ದೌಡಾಯಿಸಿ ರಕ್ಷಣೆ ಕಾರ್ಯ ಆರಂಭಿಸಿದರು. ಅದರಲ್ಲೂ ಶರಣು ಹಣಮಂತ ಎಂಬ ಮೀನುಗಾರ 2 ಗಂಟೆಗೂ ಅಧಿಕ ನದಿಯಲ್ಲಿ ಈಜಿ ಕೃಷಿಕರನ್ನು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇತನ ರಕ್ಷಣೆ ಕಾರ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದು, ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
    ಡಿಎಸ್ಪಿ ವೀರಭದ್ರಯ್ಯ, ಸಿಪಿಐ ರಾಜಶೇಖರ ಹಳಗೋದಿ, ಅಗ್ನಿಶಾಮಕ ಠಾಣಾಧಿಕಾರಿ ಮಾಣಿಕ, ಆರು ಮಂದಿ ಸಿಬ್ಬಂದಿ, ಐವರು ಮೀನುಗಾರರಾದ ಶರಣು ಹಣಮಂತ, ಶಾಮ ನಾಟೀಕಾರ, ದಶರಥ ಶಂಕರ, ಮೋನಪ್ಪ ಶಂಕರ, ದಶರಥ ಹಣಮಂತ ರಕ್ಷಣಾ ಕಾರ್ಯ ನಡೆಸಿದರು. ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ಪರೀಕ್ಷೆ ನಡೆಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts