More

    ಎಜು-ಚಾಯ್ಸ ಎಜುಕೇಷನ್ ಕೌನ್ಸೆಲಿಂಗ್ ಸೆಮಿನಾರ್

    ಬೆಂಗಳೂರು:
    ನೀಟ್ ಆಕಾಂಕ್ಷಿಗಳಿಗಾಗಿ ಮೇ 18ರಂದು ಬೆಳಗ್ಗೆ 10.25 ರಿಂದ ಮಧ್ಯಾಹ್ನ 2.30ರವರೆಗೆ ಆನ್‌ಲೈನ್ ನಲ್ಲಿ ಎಜು-ಚಾಯ್ಸ ಎಜುಕೇಷನ್ ಕೌನ್ಸೆಲಿಂಗ್ ಸೆಮಿನಾರ್ ಆಯೋಜಿಸಲಾಗಿದೆ.
    ಆಸಕ್ತರು ಉಚಿತ ವೆಬಿನಾರ್ ಲಿಂಕ್‌ಠಿಠಿ://್ಢಟಟಞ.್ಠ/್ಜ/94006608410ಮೂಲಕ ಸೆಮಿನಾರ್‌ನಲ್ಲಿ ಭಾಗವಹಿಸಬಹುದಾಗಿದೆ. ನೀಟ್ ಮತ್ತು ಮೆಡಿಕೋ ಆರೋಗ್ಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
    ಉನ್ನತ ವೈದ್ಯಕೀಯ ಕಾಲೇಜುಗಳು ಮತ್ತು ನೀಟ್ ಕುರಿತು ಮಾಹಿತಿ ನೀಡಲು ದೇಶಾದ್ಯಂತ ಪ್ರಖ್ಯಾತ ಭಾಷಣಕಾರು ಮಾಹಿತಿ ನೀಡಲಿದ್ದಾರೆ. ಅರ್ಜಿ ನಮೂನೆ, ಆಯ್ಕೆ ಕಾಲೇಜುಗಳು, ರಾಜ್ಯ, ಅಖಿಲ ಭಾರತ, ಕೋಟಾ ಇತ್ಯಾದಿಗಳನ್ನು ಭರ್ತಿ ಮಾಡಲು ಮಾರ್ಗಸೂಚಿಗಳು, ಯುಜಿ ಅಥವಾ ಪಿಜಿ ಮೂಲಕ ಆಯ್ಕೆ , ಸರ್ಕಾರಿ, ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳು, ಅಖಿಲ ಭಾರತ, ಮ್ಯಾನೇಜ್‌ಮೆಂಟ್ ಮತ್ತು ಎನ್‌ಆರ್‌ಐ ಕೋಟಾ ಮತ್ತು ಶುಲ್ಕ ರಚನೆ, ಸೀಟುಗಳನ್ನು ಆಯ್ಕೆ ಮಾಡಲು ಮೀಸಲಾತಿ / ಕೋಟಾ ನೀತಿಗಳು ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ.

    ಕರ್ನಾಟಕದ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಯುಜಿ, ಪಿಜಿ, ಎಂಬಿಬಿಎಸ್, ಎಎಸ್, ಎಂಡಿ, ಬಿಡಿಎಸ್, ಎಂಡಿಎಸ್, ಬಿಎಎಂಎಸ್, ಬಿಎಸ್‌ಎಂಎಸ್, ಬಿಎಚ್‌ಎಂಎಸ್, ಪಶುವೈದ್ಯಕೀಯ ಮತ್ತು ನರ್ಸಿಂಗ್, ಫಾರ್ಮಸಿ, ಫಿಸಿಯೋಥೆರಪಿ, ಮತ್ತು ಇತರ ಸಂಬಂಧಿತ
    ಆರೋಗ್ಯ ಕೋರ್ಸ್‌ಗಳು, ಕಾಲೇಜುಗಳು, ಅಧ್ಯಾಪಕರ ಅನುಪಾತ, ಲೈಬ್ರರಿ, ಲ್ಯಾಬ್ ಸೌಲಭ್ಯಗಳು, ಪಠ್ಯೇತರ ಚಟುವಟಿಕೆಗಳು, ಕ್ರೀಡೆ, ಹಾಸ್ಟೆಲ್, ಸಾರಿಗೆ, ಉಪಾಹಾರ ಗೃಹ, ಇತ್ಯಾದಿ ಮಾಹಿತಿ ಪಡೆಯಬಹುದಾಗಿದೆ.
    ಪ್ರಶ್ನೋತ್ತರ ಅವಧಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇತರ ಉದ್ಯೋಗ ಅವಕಾಶ, ನೀವು ಹೊಂದಿರಬಹುದಾದ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ.
    ನೋಂದಣಿಗಾಗಿ ಸಂಪರ್ಕಿಸಿ: ಡಿಡಿಡಿ.್ಞಛಿಛಿಠಿಜ್ಞ್ಛಿಟ.ಜ್ಞಿ,ಡಿಡಿಡಿ.ಛಿಛ್ಠ್ಚಟಜ್ಚಿಛಿ.ಟ್ಟಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts