More

    ನಡುಗಡ್ಡೆ ಸ್ಥಳಾಂತರಕ್ಕೆ ದೊರೆ ಸಮ್ಮತಿ..!

    ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಿಂದ ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರ ಮುಳಗಡೆಯಾಗಿದೆ. ಆದರೇ ನಡುಗಡ್ಡೆ ಪ್ರದೇಶದ ಕಟ್ಟಡ ಸ್ಥಳಾಂತರ ಕೂಗು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿತ್ತು. ಚುನಾವಣೆ ಬಂದಾಗಲೊಮ್ಮೆ ಪ್ರತಿಧ್ವನಿಸುತ್ತಿದ್ದ ನಡುಗಡ್ಡೆಯ ವಿಷಯಕ್ಕೆ ಇದೀಗ ಅಂತಿಮ ಮುದ್ರೆ ಒತ್ತಲಾಗುತ್ತಿದೆ. ಸ್ಥಳಾಂತರಕ್ಕೆ ನಾಡದೊರೆ ಬಸವರಾಜ ಬೊಮ್ಮಾಯಿ ಸಮ್ಮತಿ ಸೂಚಿಸಿದ್ದಾರೆ..!!
    ಹಿನ್ನೀರಿಯಿಂದ ರಸ್ತೆ ಸಂಪರ್ಕ ಕಡಿತಗೊಂಡು ನಡುಗಡ್ಡೆಯಾಗುವ 855(1100) ಕಟ್ಟಡಗಳ ಭೂಸ್ವಾನ ಹಾಗೂ ಪುನರ್ ವಸತಿ ಕಲ್ಪಿಸಲು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಕಳೆದ ಫೆಬ್ರವರಿಯಲ್ಲಿ ಕೆಬಿಜೆಎನ್ಎಲ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಸರ್ಕಾರ
    ಒಪ್ಪಿಗೆ ಸೂಚಿಸಿದೆ. ಆರ್ಥಿಕ ಇಲಾಖೆಯು 52.16 ಕೋಟಿ ರೂ. ಬದಲಾಗಿ ಮರು ಸರ್ವೆ ಅನುಸಾರ 113.98 ಕೋಟಿ ರೂ. ಪ್ರಸ್ತಾವನೆನ್ನು ಕೆಬಿಜೆಎನ್ಎಲ್ ಭೂಸ್ವಾನ, ಆರ್ ಆ್ಯಂಡ್ ಆರ್ ಅಡಿ ಒದಗಿಸಲಾಗಿರುವ ಅನುದಾನದಲ್ಲಿ ಭರಿಸಲು ಸಿಎಂ ಒಪ್ಪಿಗೆ ಸೂಚನೆ ನೀಡಿದ್ದಾರೆ. ತನ್ಮೂಲಕ ಕೋಟೆನಗರಿ ನಡುಗಡ್ಡೆ ಸ್ಥಳಾಂತರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕದಂತಾಗಿದೆ.
    ಕಟ್ಟಡ ಸಂಖ್ಯೆಯಲ್ಲಿ ಹೆಚ್ಚಳ:
    ಬಾಗಲಕೋಟೆ ನಗರದಲ್ಲಿ ಮುಳಗಡೆಯಾಗದೆ ನಡುಗಡ್ಡೆಯಾಗುವ ವಾರ್ಡ ನಂಬರ್ 1, 2, 3, 6, 7 ಮತ್ತು 9 ವ್ಯಾಪ್ತಿಯಲ್ಲಿ ಬರುವ ಕಿಲ್ಲಾ, ಜೈನಪೇಟ್, ಹಳಪೇಟ ಪ್ರದೇಶದಲ್ಲಿ ಈ ಮೊದಲು ಮಾಡಿದ ಸರ್ವೆ ಪ್ರಕಾರ 855 ಕಟ್ಟಡಗಳು(ಮನೆ, ಅಂಗಡಿ, ಇತ್ಯಾದಿ) ಭೂ ಸ್ವಾನ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಸ್ಥಳಾಂತರ ವಿಷಯ ನೆನೆಗುದಿಗೆ ಬಿದ್ದ ಬಳಿಕ ಕಟ್ಟಡಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸದ್ಯ 1100 ಕಟ್ಟಡಗಳು ನಡುಗಡೆಯಾಗಿವೆ. ಕಟ್ಟಡ ಸಂಖ್ಯೆ ಹೆಚ್ಚಳ ಬಗ್ಗೆ ಸಾಕಷ್ಟು ಆರೋಪ, ಪ್ರತ್ಯಾರೋಪ, ಅನುಮಾನಗಳಿವೆ. ಆದರು ಇದೀಗ ಎಲ್ಲ ಕಟ್ಟಡಗಳನ್ನು ಪರಿಗಣಿಸಲಾಗುತ್ತಿದೆ.
    ಸಂಪೂರ್ಣ ಸ್ಥಳಾಂತರ, ಪರ್ಯಾಯ ವ್ಯವಸ್ಥೆ ಸೇರಿದಂತೆ ಹತ್ತಾರ ಆಲೋಚನೆ, ಯೋಜನೆಯಿಂದ ಆಲಮಟ್ಟಿ ಹಿನ್ನೀರಿಂದ ಮುಳಗಡೆಯಿಂದ ಉಂಟಾಗುವ ನಡುಗಡ್ಡೆ ಪ್ರದೇಶದ ಸ್ಥಳಾಂತರ ಅಡ್ಡಕತ್ತರಿಯಲ್ಲಿ ಸಿಲುಕ್ಕಿತ್ತು. ಇದಕ್ಕೆ ಅಂತಿಮ ಸ್ವರೂಪ ದೊರೆತಿರುವುದು ಸಂತ್ರಸ್ತರಲ್ಲಿ ಸಂತಸ ಉಂಟು ಮಾಡಿದೆ.
    ಬಿಟಿಡಿಎ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ನಡುಗಡ್ಡೆ ಪ್ರದೇಶ ಸ್ಥಳಾಂತರ ಮಾಡುವುದು ನಮ್ಮ ಸರ್ಕಾರದ ಉದ್ದೇಶವಾಗಿತ್ತು. 1100 ಕಟ್ಟಡಗಳ ಭೂ ಸ್ವಾನ, ಪುನರ್ ವಸತಿ ಕಲ್ಪಿಸಲು 113.98 ಕೋಟಿ ರೂ. ಪ್ರಸ್ತಾವನೆ ಸಿಎಂ ಬಸವರಾಜ ಬೊಮ್ಮಾಯಿ ಅಕೃತವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಬಾಗಲಕೋಟೆ ನಗರದ ಸಂತ್ರಸ್ತರ ಸಮಸ್ಯೆ ಸ್ಪಂದಿಸಿ ಪರಿಹರಿಸುವಲ್ಲಿ ನಮ್ಮ ಆದ್ಯತೆ ಎಂದು ವಿಜಯವಾಣಿಗೆ ತಿಳಿಸಿದರು‌.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts