More

    ನಗರಸಭೆ ಆಡಳಿತ ಹಸ್ತಾಂತರ ವಿಳಂಬ

    ಸಾಗರ: ನಗರಸಭೆ ಸದಸ್ಯರಾಗಿ ಆಯ್ಕೆಯಾಗಿ ವರ್ಷವಾದರೂ ಈವರೆಗೆ ಚುನಾಯಿತ ಸದಸ್ಯರಿಗೆ ಆಡಳಿತ ಹಸ್ತಾಂತರಿಸದಿರುವುದು ಮತ್ತು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಳಂಬ ಖಂಡಿಸಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ನಗರಸಭೆ, ಪುರಸಭೆ, ಪಪಂ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿ ಒಂದು ವರ್ಷ ಕಳೆದರೂ ಈತನಕ ಅವರಿಗೆ ಆಡಳಿತ ನಡೆಸುವ ಅವಕಾಶ ಸಿಕ್ಕಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯ್ಕೆ ಸಾಕ್ಷಿ ಎಂದು ದೂರಿದರು.

    ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿ ಪ್ರಕರಣ ನ್ಯಾಯಾಲಯದಲ್ಲಿದೆ. ಸರ್ಕಾರ ಸಮರ್ಥ ದಾಖಲೆ ಒದಗಿಸಿ ಪ್ರಕರಣ ಇತ್ಯರ್ಥಪಡಿಸಿಕೊಂಡು ಚುನಾವಣೆ ನಡೆಸಿದರೆ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳಿಗೆ ಆಡಳಿತ ನಡೆಸುವ ಅವಕಾಶ ಸಿಗುತಿತ್ತು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಆರೋಪಿಸಿದರು.

    ನಗರಸಭೆ ಸದಸ್ಯೆ ಎನ್.ಲಲಿತಮ್ಮ ಮಾತನಾಡಿ, ನಗರಸಭೆ ಅಧಿಕಾರಿಗಳಿಗೆ ವಾರ್ಡ್ ಸಮಸ್ಯೆ ಹೇಳಿದರೆ ಕನಿಷ್ಠ ಸ್ಪಂದಿಸುವ ಮನೋಭಾವ ತೋರಿಸುತ್ತಿಲ್ಲ. ಇದರಿಂದ ನಾವು ವಾರ್ಡ್ ವ್ಯಾಪ್ತಿಯಲ್ಲಿ ಸದಸ್ಯರಾಗಿದ್ದೂ ಪ್ರಯೋಜನವಾಗಿಲ್ಲ. ವಾರ್ಡ್ ಕೆಲಸದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ಫೋನ್ ಮಾಡಿದರೆ ಪ್ರತಿಕ್ರಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಕಾಂಗ್ರೆಸ್ ನಗರ ಅಧ್ಯಕ್ಷ ತಸ್ರೀಫ್, ಪ್ರಧಾನ ಕಾರ್ಯದರ್ಶಿ ಮಹಾಬಲ ಕೌತಿ, ನಗರಸಭಾ ಸದಸ್ಯರಾದ ನಾಗರತ್ನಾ, ಮಂಡಗಳಲೆ ಗಣಪತಿ, ಮಧುಮಾಲತಿ, ಸಬೀನಾ, ಶಾಹಿನಾ, ಉಮೇಶ್, ಮಹಮ್ಮದ್ ಜಕ್ರಿಯಾ, ತಾಹೀರ್, ತನ್ವೀರ್, ವೆಂಕಟೇಶ್ ಮೆಳವರಿಗೆ, ಆರ್.ಗಣಾಧೀಶ್, ಸರಸ್ವತಿ ನಾಗರಾಜ್, ಮೈಕಲ್ ಡಿಸೋಜ, ತಾರಾಮೂರ್ತಿ, ರವಿ ಜಂಬಗಾರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts