More

    ನಂದಿ ಜಾತ್ರೆ- ತಿರಂಗಾ ಯಾತ್ರೆ, ಬುತ್ತಿಗಂಟು- ಬಾವುಟದ ನಂಟು, ಬಸವಭೂಮಿಯಲ್ಲಿ ಏನಿದು ಮಹಿಳೆಯರ ಮೆರವಣಿಗೆ ?

    ವಿಜಯಪುರ: ಬಸವ ಜನ್ಮ ಸ್ಥಳ ಬಸವನಬಾಗೇವಾಡಿ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ದಾಸೋಹಕ್ಕಾಗಿ ನೂರಾರು ಮಹಿಳೆಯರಿಂದ ರೊಟ್ಟಿ ಬುತ್ತಿ ಮೆರವಣಿಗೆ ನಡೆಯಿತು.
    ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಮನೆಯಿಂದಲೇ ರೊಟ್ಟಿ ತಯಾರಿಸಿ ದೇವಸ್ಥಾನಕ್ಕೆ ತರಲಾಗುತ್ತಿದ್ದು, ತನ್ನಿಮಿತ್ತ ಶನಿವಾರ ನೂರಾರು ಮಹಿಳೆಯರು ರೊಟ್ಟಿ ಬುತ್ತಿ ತಲೆ ಮೇಲೆ ಹೊತ್ತು ರಾಷ್ಟ್ರ ಧ್ವಜ ಹಿಡಿದು ಸಾಲು ಸಾಲಾಗಿ ಆಗಮಿಸಿದ್ದು ವಿಶೇಷವಾಗಿತ್ತು.
    ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಗಣ್ಯಾತಿಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಿಳಿಜೋಳದ ರೊಟ್ಟಿ, ಶೇಂಗಾ ಚಟ್ನಿ ಮತ್ತಿತರ ಊಟದ ಸಾಮಗ್ರಿ ತುಂಬಿದ ರೊಟ್ಟಿ ಬುತ್ತಿಯೊಂದಿಗೆ ತಿರಂಗಾ ಧ್ವಜ ಹಿಡಿದು ಮಹಿಳೆಯರು ಹೆಜ್ಜೆ ಹಾಕುತ್ತಿದ್ದರೆ ಶಾಲಾ ಮಕ್ಕಳು ಸ್ವಾತಂತ್ರ್ಯ ಉತ್ಸವದ ದಿನದಂದು ಪ್ರಭಾತ ಪೇರಿ ನಡೆಸಿದಂತೆ ಭಾಸವಾಗುತ್ತಿತ್ತು. ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರಾಗಿಯಾಗಿ ನೂರಾರು ಜನ ದೇಶ ಭಕ್ತಿ ಹಾಗೂ ದೈವ ಭಕ್ತಿ ಮೆರೆದಿದ್ದು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts