More

    ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಅಟ್ಟಿದರೆ ಪಾಪ ಕಟ್ಟಿಟ್ಟ ಬುತ್ತಿ

    ಬಸವನಬಾಗೇವಾಡಿ: ವಯೋವೃದ್ಧ ತಂದೆ-ತಾಯಿಯನ್ನು ಕೊನೆಯವರೆಗೂ ಪ್ರೀತಿ ಗೌರವದಿಂದ ಸಾಕಿದರೆ ಅದಕ್ಕಿಂತ ದೊಡ್ಡ ಪುಣ್ಯ ಯಾವುದೂ ಇಲ್ಲ ಎಂದು ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಹೇಳಿದರು.

    ಪಟ್ಟಣದ ಗಣಪತಿ ಚೌಕ ಬಳಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಸುಮಂಗಲೆಯರಿಂದ ತೊಟ್ಟಿಲೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮ ಉದ್ಘಾಟನೆ ಮತ್ತು ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಕೆಲವರು ವಯೋವೃದ್ಧ ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡುತ್ತಾರೆ. ಅದು ಪಾಪದ ಕೆಲಸ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಿಜೆಪಿ ಮುಖಂಡ ಸಂಗನಗೌಡ ಚಿಕ್ಕೊಂಡ ಮಾತನಾಡಿದರು.

    ಬಸವರಾಜ ಹಾರಿವಾಳ, ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ, ಅರ್ಚಕ ಸಂಗಪ್ಪ ಸಂಪನ್ನವರ, ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಶಿವಪ್ಪ ಬುರ್ಲಿ, ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಅಶೋಕ ಸಂಪನ್ನವರ, ಮತಾಬ್ ಬಮ್ಮನಳ್ಳಿ ಮತ್ತಿತರರಿದ್ದರು.

    ಮನಸ್ವಿ ಶಿರಗುಪ್ಪಿ ನೃತ್ಯ ಪ್ರದರ್ಶಿಸಿದರು. ಪವನ ಹೂಗಾರ ಪ್ರಾರ್ಥಿಸಿದರು. ಶ್ರೀಶೈಲ ಶಿರಗುಪ್ಪಿ ಸ್ವಾಗತಿಸಿದರು. ಸುಭಾಶ್ಚಂದ್ರ ಹಡಪದ ನಿರೂಪಿಸಿದರು. ಗುರುಲಿಂಗ ಹಡಪದ ವಂದಿಸಿದರು. ಇದಕ್ಕೂ ಮುನ್ನ ವೀರಭದ್ರ ದೇವರ ಬೆಳ್ಳಿ ಮೂರ್ತಿ ಹಾಗೂ ತೊಟ್ಟಿಲನ್ನು ಸಕಲ ವಾದ್ಯಗಳೊಂದಿಗೆ ಗಂಗಾಸ್ಥಳದವರೆಗೆ(ಬಸವ ತೀರ್ಥ) ಮೆರವಣಿಗೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಬಿಬಿಜಿಡಿ 14-6(ಎ): ಬಸವನಬಾಗೇವಾಡಿ ಪಟ್ಟಣದ ಗಣಪತಿ ಚೌಕ ಬಳಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸುಮಂಗಲೆಯರಿಂದ ತೊಟ್ಟಿಲೋತ್ಸವ ಹಾಗೂ ಧರ್ಮಸಭೆಯನ್ನು ಶ್ರೀಗಳು ಹಾಗೂ ಗಣ್ಯರು ಉದ್ಘಾಟಿಸಿದರು. ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಿಜೆಪಿ ಮುಖಂಡ ಸಂಗನಗೌಡ ಚಿಕ್ಕೊಂಡ ಇತರರಿದ್ದರು.

    ಬಿಬಿಜಿಡಿ14-6(ಬಿ): ಬಸವನಬಾಗೇವಾಡಿ ಪಟ್ಟಣದ ಗಣಪತಿ ಚೌಕ ಬಳಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತ್ಯುತ್ಸವ ಅಂಗವಾಗಿ ಬೆಳ್ಳಿ ಮೂರ್ತಿ ಹಾಗೂ ತೊಟ್ಟಿಲನ್ನು ಸಕಲ ವಾದ್ಯಗಳೊಂದಿಗೆ ಗಂಗಾಸ್ಥಳಕ್ಕೆ ಮೆರವಣಿಗೆಯಲ್ಲಿ ಒಯ್ಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts