More

    ಧರ್ಮ ಸಂಸ್ಕಾರದಿಂದ ಜೀವನ ಪಾವನ

    ಹಾವೇರಿ: ಪ್ರತಿಯೊಬ್ಬ ಮನುಷ್ಯ ಧರ್ಮ ಸಂಸ್ಕಾರಗಳ ಅರಿವು ಹೊಂದುವುದು ಅವಶ್ಯ. ಜತೆಗೆ ಅದನ್ನು ಪಾಲಿಸಿದರೆ ಜೀವನ ಪಾವನವಾಗುವುದು ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯರು ಹೇಳಿದರು.
    ತಾಲೂಕಿನ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಜಂಗಮ ವಟುಗಳಿಗೆ ಅಯ್ಯಾಚಾರ, ಭಕ್ತರಿಗೆ ಲಿಂಗದೀಕ್ಷೆ ಸಂಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ವೀರಶೈವ ಧರ್ಮ ಪರಂಪರೆಯಲ್ಲಿ ಬರುವ 16 ಸಂಸ್ಕಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಸಂಸ್ಕಾರವೇ ದೀಕ್ಷಾ ಸಂಸ್ಕಾರ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವೇ ದೀಕ್ಷೆಯಾಗಿದೆ. ವೀರಶೈವ ಸನಾತನ ಧರ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಲಿಂಗದೀಕ್ಷೆಗೆ ತನ್ನದೇ ಆದ ಮಹತ್ವ ನೀಡಿದೆ. ಲಿಂಗದೀಕ್ಷೆ ಪಡೆಯಲು ಯಾವುದೇ ಜಾತಿ, ಲಿಂಗ, ಧರ್ಮ ಬೇಧವಿಲ್ಲ. ದೀಕ್ಷೆ ಎಂಬ ಪದಕ್ಕೆ ತನ್ನದೆ ಆದ ಮಹತ್ವವಿದೆ. ದೀ ಎಂದರೇ ದಿಯತೇ ಶಿವಜ್ಞಾನಂ ಕ್ಷೀಯತೆ ಪಾಶ ಬಂಧನಂ ಶಿವಜ್ಞಾನ ಲಭಿಸಿ ಪಾಪಕರ್ಮಗಳನ್ನು ನಾಶ ಮಾಡುವ ಶಕ್ತಿ ದೀಕ್ಷೆಗಿಯಿದೆ ಎಂದರು. 21 ಜಂಗಮ ವಟುಗಳಿಗೆ ಅಯ್ಯಾಚಾರ, 8 ಜನ ಭಕ್ತರಿಗೆ ಲಿಂಗದೀಕ್ಷೆ ಸಂಸ್ಕಾರವನ್ನು ಶ್ರೀಗಳು ನೀಡಿದರು. ಇದಕ್ಕೂ ಮುನ್ನ ದೀಕ್ಷಾ ವಟುಗಳಿಗೆ ಸುರಗಿ ಸಮಾರಾಧನೆ, ಉಮಾಮಹೇಶ್ವರ ಸಮೇತ ಗಣಪತಿ ಪಂಚಕಳಶ ಪೂಜೆ, ಶ್ರೀಮಠದ ಉಭಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಶ್ರೀಗಳ ಇಷ್ಟಲಿಂಗ ಮಹಾಪೂಜೆ ಜರುಗಿತು.
    ಜಗದ್ಗುರು ಪಂಚಾಚಾರ್ಯ ಧಾರ್ವಿುಕ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ಮಹೇಶ್ವರಯ್ಯ ಹಾವೇರಿಮಠ ಅವರಿಂದ ಪೂಜಾ ಕೈಂಕರ್ಯಗಳು ಜರುಗಿದವು. ನೆಗಳೂರ, ಹಾವೇರಿ, ಗದಗ, ದಾವಣಗೆರೆ, ವಿಜಯನಗರ ಜಿಲ್ಲೆಯ ನಾನಾ ಭಾಗಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts