More

    ಧರ್ಮ ಉಳಿಸಿದ ಶ್ರೀ ವೀರಭದ್ರ ದೇವರು

    ರಾಯಚೋಟಿ: ಶಿವಸಂಸ್ಕೃತಿಯನ್ನು ಎತ್ತಿ ಹಿಡಿದಿರುವ ಶ್ರೀ ವೀರಭದ್ರ ದೇವರ ಅವತಾರದ ಹಿಂದೆ ಶಿಷ್ಟರ ರಕ್ಷಣೆ ಮತ್ತು ದುಷ್ಟರ ನಿಗ್ರಹದ ಸಂದೇಶ ಅಡಗಿದೆ. ಅಧರ್ಮವನ್ನು ಅಳಿಸಿ, ಧರ್ಮ ಉಳಿಸಿದ ಶ್ರೀ ವೀರಭದ್ರ ದೇವರá- ವೀರಶೈವರಷ್ಟೇ ಅಲ್ಲದೆ, ವಿಭಿನ್ನ ಸಮಾಜಗಳಿಂದಲೂ ಪೂಜಿತನಾಗಿದ್ದಾನೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

    ಆಂಧ್ರಪ್ರದೇಶದ ರಾಯಚೋಟಿ ಕ್ಷೇತ್ರದ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ದಶಕದ ಸಂಭ್ರಮದ ಅಂಗವಾಗಿ ಹುಬ್ಬಳ್ಳಿ ವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

    ಭೂಲೋಕದಲ್ಲಿ ವೀರಭದ್ರಸ್ವಾಮಿಯ ಮೊದಲ ಅವತಾರವಾಗಿ ರಾಯಚೋಟಿ ವೀರಭದ್ರಸ್ವಾಮಿ ಭದ್ರಕಾಳಿ ಸಮೇತನಾಗಿ ಈ ಕ್ಷೇತ್ರದಲ್ಲಿ ನೆಲೆನಿಂತಿರುವುದು ಶಿವ-ಶಕ್ತಿಯರ ಸಂಕೇತವಾಗಿದೆ. ರಾಯಚೋಟಿ ಕ್ಷೇತ್ರದಿಂದಲೇ ಎಲ್ಲೆಡೆ ವೀರಭದ್ರ ಸ್ವಾಮಿಯ ದೇಗುಲಗಳ ನಿರ್ವಣಕ್ಕೆ ಶಕ್ತಿ ವಿನಿಮಯವಾಗಿದೆ ಎಂಬುದು ತಿಳಿದು ಬರುತ್ತದೆ ಎಂದರು.

    ಧರ್ಮ ಸಮ್ಮೇಳನ ಉದ್ಘಾಟಿಸಿದ ಆಂಧ್ರ ಪ್ರದೇಶ ಕಡಪಾ ಜಿಲ್ಲೆಯ ಎಂಡೋಮೆಂಟ್ ಇಲಾಖೆಯ ಅಸಿಸ್ಟಂಟ್ ಕಮಿಷನರ್ ಶಂಕರ ಬಾಲಾಜಿ ಮಾತನಾಡಿ, ದಕ್ಷಿಣ ಭಾರತದಲ್ಲಿರುವ ರಾಯಚೋಟಿ ವೀರಭದ್ರ ದೇವಾಲಯವು ತನ್ನದೇ ಆದ ವೈಶಿಷ್ಟ್ಯಗಳ ಮೂಲಕ ವ್ಯಾಪಕ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಸಮ್ಮೇಳನ ಹಮ್ಮಿಕೊಂಡಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.

    ತುಮಕೂರು ಜಿಲ್ಲೆ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ತಾಲೂಕು ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರಾಯಚೂರು ಜಿಲ್ಲೆ ಕಿಲ್ಲೆ ಸಾವಿರದೇವರ ಸಂಸ್ಥಾನ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲ ತಾಲೂಕು ಸಂಪಗಾಂವ ಕಟಾಪುರಿ ಹಿರೇಮಠದ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು.

    ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿಯ ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಸಿ.ಎಂ. ಶಿವಶರಣಪ್ಪ ಕಲಬುರ್ಗಿ, ಪಿ.ಎಂ. ಚಿಕ್ಕಮಠ, ಪ್ರಕಾಶ ಅಂದಾನಿಮಠ, ಶಂಕರ ಕುರ್ತಕೋಟಿ ಇತರರು ಇದ್ದರು.

    ಗುರುರಕ್ಷೆ: ನಂದ್ಯಾಲದ ಬೃಹ್ಮಶ್ರೀ ನಂದುಲಮಠದ ಶಶಿಭೂಷಣ ಸಿದ್ಧಾಂತಿ ಹಾಗೂ ಹುಬ್ಬಳ್ಳಿಯ ಸುಶ್ರುತಾ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಕೆ. ಪಾಟೀಲ, ದಾಸೋಹ ಸಮಿತಿಯ ವೀರಯ್ಯ ಮುಪ್ಪಯ್ಯನಮಠ ಸೇರಿ ಹಲವು ಗಣ್ಯರಿಗೆ, ಸೇವಾಕರ್ತರಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts