More

    ಧರ್ಮಸ್ಥಳ ಸಂಸ್ಥೆಯಿಂದ ಸಮಾಜಮುಖಿ ಕಾರ್ಯ

    ಸೇಡಂ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿ ಕಾರ್ಯಗಳು ನಡೆಸುತ್ತಿದ್ದು, ಸಂಸ್ಥೆಯ ಯೋಜನೆಗಳು ಪ್ರೇರಣಾದಾಯಕವಾಗಿವೆ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.

    ಪಟ್ಟಣದ ಬಸವನಗರದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗಾಗಿ ಶ್ರೀ ವಿರೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ಹಲವಾರು ಕಾರ್ಯಗಳನ್ನು ಸಂಸ್ಥೆ ಮಾಡುತ್ತಿದೆ. ಪೂಜ್ಯರ ಆಶೀರ್ವಾದ ಯೋಜನೆಯ ಸಹಕಾರ ತಾಲೂಕಿನ ಜನರ ಮೇಲೆ ನಿರಂತರವಾಗಿರಲಿ, ಧರ್ಮಸ್ಥಳ ಸಂಸ್ಥೆಯ ಎಲ್ಲಾ ಕಾರ್ಯಗಳಿಗೆ ನಿರಂತರ ಸಹಕಾರ ನೀಡಲಾಗುವುದು ಎಂದರು.

    ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಮಂಜುನಾಥ ಎಸ್.ಜಿ. ಮಾತನಾಡಿ, ಗ್ರಾಮೀಣ ಜನರ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಸ್ವ-ಸಹಾಯ ಸಂಘಗಳ ಮೂಲಕ ಜನರಿಗೆ ಆರ್ಥಿಕ ಸಹಕಾರ ನೀಡಿ ಸ್ವಯಂ ಉದ್ಯೋಗದ ನಡೆಸುವುದರೊಂದಿಗೆ ಬದುಕು ರೂಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದೇವೆ ಎಂದರು.

    ಪುರಸಭೆ ಉಪಾಧ್ಯಕ್ಷ ಶಿವಾನಂದಸ್ವಾಮಿ, ಪ್ರಮುಖರಾದ ಓಂಪ್ರಕಾಶ ಪಾಟೀಲ್, ರಾಮು ನಾಯಕ, ರಾಮು ಕಣೇಕಲ್, ಶಾರದಾಬಾಯಿ, ಸುಜಾತಾ ಹಿರೇಮಠ, ರಾಚಪ್ಪ ಕುಂಬಾರ, ಬಸವರಾಜ ಕೋರವಾರ, ಬಸಮ್ಮ, ಆಕಾಶ ಕೀರಮಾನಕರ, ಕಾವೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts