More

    ಧರೆಗೆ ಒರಗಿದ 54 ವಿದ್ಯುತ್ ಕಂಬಗಳು

    ಮೂಡಿಗೆರೆ: ತಾಲೂಕಿನಲ್ಲಿ ಮಳೆಯ ಅನಾಹುತಗಳ ಸರಣಿ ಮುಂದುವರಿದಿದೆ. ಅಲ್ಲಲ್ಲಿ ಭೂಕುಸಿತ, ಮನೆಗಳು ನೆಲಸಮವಾಗುತ್ತಿವೆ. 54 ವಿದ್ಯುತ್ ಕಂಬಗಳು ಮುರಿದಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಗಾಳಿಯೊಂದಿಗೆ ಮಳೆ ಆರ್ಭಟವೂ ಹೆಚ್ಚಾಗಿದ್ದರಿಂದ ಬುಧವಾರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

    ಕಡಿದಾಳು ಸರ್ಕಾರಿ ಶಾಲೆ ಗೋಡೆ ಮಂಗಳವಾರ ರಾತ್ರಿ ಕುಸಿದಿದ್ದರೆ ಹೊಯ್ಸಳಲು ಗ್ರಾಮದ ಸಮುದಾಯ ಭವನದ ಮೇಲೆ ಮರ ಬಿದ್ದು ಛಾವಣಿ ಜಖಂಗೊಂಡಿದೆ. ದಿಣ್ಣೆಕೆರೆಯ ಬೈರಯ್ಯ, ಹಾರ್ಮಕ್ಕಿಯ ಎಚ್.ಎನ್.ಬೈರೇಗೌಡ, ಜಿ.ಅಗ್ರಹಾರದ ಮೋಹನ್, ಹೆಸಗಲ್ ಸಣ್ಣಯ್ಯ ಎಂಬುವರ ಮನೆ ನೆಲಸಮವಾಗಿದೆ. ತತ್ಕೊಳ, ಕುಂದೂರು, ಕೊಲ್ಲಿಬೈಲು, ಕಡೆಮಾಡ್ಕಲ್, ಘಟ್ಟದಹಳ್ಳಿ, ಕೆಲ್ಲೂರು ಗ್ರಾಮದಲ್ಲಿ ಭೂಕುಸಿತದಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.ತಂತಿ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಧರೆಗುರುಳಿದ್ದು ಗೋಣಿಬೀಡು, ಜನ್ನಾಪುರ, ಅಣಜೂರು, ನಿಡಗೋಡು, ಕಮ್ಮರಗೋಡು, ಕಸ್ಕೆಬೈಲು, ಹಂತೂರು, ಕಣಚೂರು, ದೇವರುಂದ, ಉದುಸೆ, ಕಿರುಗುಂದ, ಹೆಗ್ಗರವಳ್ಳಿ, ಕನ್ನೆಹಳ್ಳಿ, ಹೊಸಕೆರೆ, ಊರುಬಗೆ, ಭೈರಾಪುರ, ಗೌಡಹಳ್ಳಿ, ಹಳೇಕೆರೆ, ಬಿಳ್ಳೂರು, ದಾರದಳ್ಳಿ, ಹಂಡುಗುಳಿ, ಬಾಳೆಗದ್ದೆ ಗ್ರಾಮಗಳಲ್ಲಿ ಕಳೆದ 5 ದಿನದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

    ಚಿನ್ನಿಗ, ಜಿ.ಹೊಸಳ್ಳಿ, ಗಾಡಿಚೌಕ, ನಂದಿಪುರ, ಮಾಕೋನಹಳ್ಳಿ, ದಾರದಹಳ್ಳಿ, ಸಾರಗೋಡು, ತಳವಾರ, ಬಿದರಳ್ಳಿಯ ತೋಟಗಳಲ್ಲಿ ಭೂಕುಸಿತ ಹಾಗೂ ಮರ ಬಿದ್ದು ಕಾಫಿ ಗಿಡಗಳು ನೆಲಕಚ್ಚಿವೆ. ಹೇಮಾವತಿ, ಜಪಾವತಿ, ಸುಂಡೆಕೆರೆ, ಸುಣ್ಣದಹಳ್ಳಗಳು ಉಕ್ಕಿ ಗದ್ದೆ ಬಯಲಲ್ಲಿ ಹರಿಯುತ್ತಿವೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts