More

    ಧರೆಗುರುಳಿದ ಬೃಹತ್ ಮರ, ವಾಹನ ಜಖಂ

    ಬೆಳಗಾವಿ: ನಗರದಲ್ಲಿನ ಬೃಹತ್ ಮರುಗಳು ಧರೆಗುರುಳಿ ಅವಾಂತರ ಸೃಷ್ಟಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸದ ಪಾಲಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮದಿಂದಾಗಿ ಜನ ಪ್ರಾಣಭಯದಿಂದಲೇ ಓಡಾಡುವಂತಾಗಿದ್ದಲ್ಲದೆ ಆಕ್ರೋಶ ವ್ಯಕ್ತವಾಗಿದೆ.

    ಚನ್ನಮ್ಮ ವೃತ್ತದ ಸಮೀಪದ ಸಿವಿಲ್ ಆಸ್ಪತ್ರೆ ಮುಂದಿನ ರಸ್ತೆ ಹಾಗೂ ರಾಯಣ್ಣ ವೃತ್ತದ ಸಮೀಪದಲ್ಲಿ ಮುಖ್ಯ ರಸ್ತೆಯಲ್ಲಿ ಬೃಹತ್ ಮರಗಳು ನೆಲಕ್ಕುರಳಿ ಇಬ್ಬರು ಸವಾರರನ್ನು ಬಲಿ ಪಡೆದ ಘಟನೆ ಮಾಸುವ ಮುನ್ನವೆ, ಗುರುವಾರ ಮತ್ತೊಂದು ಬೃಹತ್ ಮರ ಧರೆಗುರುಳಿದ್ದು, ಲಕ್ಷಾಂತರ ಬೆಲೆಬಾಳುವ ಮೂರು ವಾಹನಗಳು ಜಖಂಗೊಂಡಿವೆ. ಇಲ್ಲಿನ ಮಾರ್ಕೆಟ್ ಠಾಣೆ ವ್ಯಾಪ್ತಿ ಕೇಂದ್ರ ಬಸ್ ನಿಲ್ದಾಣದಿಂದ ಚನ್ನಮ್ಮ ವೃತ್ತಕ್ಕೆ ತೆರಳುವ ಜನನಿಬಿಡ ಮಾರ್ಗ, ಸದಾ ವಾಹನ ದಟ್ಟಣೆ ಹೊಂದಿರುವ ರಸ್ತೆಯಲ್ಲೇ ಅರಣ್ಯ ಇಲಾಖೆ ಕಚೇರಿ ಆವರಣದ ಬೃಹತ್ ಮರ ಬಿದ್ದಿದೆ. ಒಂದು ಕಾರು, ಎರಡು ಆಟೋರಿಕ್ಷಾ ಜಖಂಗೊಂಡಿದ್ದು, ಮರ ಬೀಳುವುದನ್ನು ಗಮನಿಸಿದ ಜನ ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದರಿಂದ ಪ್ರಾಣಾಪಾಯವಾಗಿಲ್ಲ. ಆದರೆ, ಇಂತಹ ನೂರಾರು ಬೃಹತ್ ಮರಗಳು ನಗರದಲ್ಲಿದ್ದು ಜನ ಆತಂಕದಿಂದಲೇ ಓಡಾಡುತ್ತಿದ್ದಾರೆ.

    ಆದರೂ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಮಾತ್ರ ಏಕೆ ಕ್ರಮವಹಿಸುತ್ತಿಲ್ಲ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ರಸ್ತೆಯಲ್ಲಿನ ವಾಹನಗಳ ಮೇಲೆ ಮರ ಬಿದ್ದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು, ಅರಣ್ಯ ಇಲಾಖೆ ಅಧಿಕಾರಿಗಳು ಮರ ತೆರುವುಗೊಳಿಸಿದರು. ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts