More

    ಧಗ್ರಾಯೋ ಕಾರ್ಯ ಶ್ಲಾಘನೀಯ

    ಕುಮಟಾ: ಜಿಲ್ಲೆಯ ಕರೊನಾ ಸೋಂಕಿತರ ಜೀವರಕ್ಷಣೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಮ್ಲಜನಕ ನೀಡಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಜಿಲ್ಲೆಯ ಸಮಸ್ತ ಜನರ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೇಳಿದರು.

    ತಾಲೂಕಿನ ಬೆಟ್ಕುಳಿಯ ಪದ್ಮಾವತಿ ಅನಿಲ ಘಟಕದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಉಚಿತವಾಗಿ ವಿತರಿಸಲು ಶನಿವಾರ ನೀಡಿದ ಐದು ಟನ್ ಆಕ್ಸಿಜನ್ ಅನ್ನು ಜಿಲ್ಲಾಡಳಿತದ ಪರವಾಗಿ ಸ್ವೀಕರಿಸಿ ಅವರು ಮಾತನಾಡಿದರು.

    ಕರೊನಾ ಸಂಕಷ್ಟದ ಸಮಯದಲ್ಲಿ ನಾಡಿನ ಜನರೊಂದಿಗೆ ಸದಾ ಇದ್ದೇವೆ ಎಂಬುದನ್ನು ಗ್ರಾಮಾಭಿವೃದ್ಧಿ ಯೋಜನೆ ಈ ಮೂಲಕ ತೋರಿಸಿದೆ. ಬಡವರಿಗೆ ಆಹಾರ ಧಾನ್ಯಗಳ ಕಿಟ್, ಭಿಕ್ಷುಕರು, ರೋಗಿಗಳಿಗೆ, ಹೆದ್ದಾರಿಯಲ್ಲಿ ವಾಹನ ಚಾಲಕ, ನಿರ್ವಾಹಕರಿಗೆ ಉಚಿತ ಊಟ, ಕರೊನಾ ಸೋಂಕಿತರಿಗೆ ವಾಹನ ವ್ಯವಸ್ಥೆ, ಆಕ್ಸಿಜನ್ ವೆಂಟಿಲೇಟರ್ ವಿತರಣೆ, ಕಾನ್ಸನ್ಂಟ್ರೇಟರ್ ಇನ್ನಿತರ ಪರಿಕರಗಳ ಕೊಡುಗೆ ನೀಡಿರುವುದು ಶ್ಲಾಘನೀಯ ಮತ್ತು ಪುಣ್ಯದ ಕಾರ್ಯ. ಎಲ್ಲರ ಸಹಕಾರದಿಂದ ಶೀಘ್ರದಲ್ಲೇ ಉತ್ತರ ಕನ್ನಡ ಜಿಲ್ಲೆ ಕರೊನಾ ಮುಕ್ತವಾಗಲಿ ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಮಾತನಾಡಿ, ಸ್ಟೇಟ್ ಬ್ಯಾಂಕ್ ಇಂಡಿಯಾದ ವ್ಯವಹಾರ ಸಂಪರ್ಕ ಜವಾಬ್ದಾರಿ ಹೊತ್ತು ಈಗಾಗಲೇ ಹಳ್ಳಿಗಳಲ್ಲಿ ಮುನ್ನೂರಕ್ಕಿಂತ ಹೆಚ್ಚು ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆದು ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯ ಒದಗಿಸುತ್ತಿದ್ದೇವೆ. ನಮ್ಮ ಕಾರ್ಯಕರ್ತರು ಕರೊನಾ ಸೇನಾನಿಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

    ನೋಡಲ್ ಅಧಿಕಾರಿ ಧನಂಜಯ ಹೆಗಡೆ ಮಾತನಾಡಿದರು. ಜಿಪಂ ಸದಸ್ಯ ರತ್ನಾಕರ ನಾಯ್ಕ, ಸೂರಜ ನಾಯ್ಕ, ಬರ್ಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ ನಾಯ್ಕ, ಅಧ್ಯಕ್ಷೆ ವಿಶಾಲಾಕ್ಷಿ ಪಟಗಾರ, ಸೇವಾ ಪ್ರತಿನಿಧಿ ಮಂಗಲಾ ಪಟಗಾರ ಇತರರು ಇದ್ದರು. ಯೋಜನಾಧಿಕಾರಿ ನಾಗರಾಜ ನಾಯ್ಕ, ನಾರಾಯಣ ಪಟಗಾರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts