More

    ದೌಜ್ರ್ಯನ ಹತ್ತಿಕ್ಕುವಲ್ಲಿ ಸಕರ್ಾರ ವಿಫಲ

    ಹುಮನಾಬಾದ್: ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ದಲಿತ ಸಂಘಟನೆಗಳ ತಾಲೂಕು ಒಕ್ಕೂಟ ಪ್ರತಿಭಟನಾ ಮೆರವಣಿಗೆ ನಡೆಸಿತು.

    ವೀರಭದ್ರೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಪ್ರಮುಖರು, ರಾಜ್ಯ ಸೇರಿ ದೇಶದ ವಿವಿಧೆಡೆ ದಲಿತರ ಮೇಲೆ ವಿಶೇಷವಾಗಿ ಮಕ್ಕಳು, ಮಹಿಳೆಯರ ಮೇಲೆ ದೌಜ್ರ್ಯನ ಹೆಚ್ಚುತ್ತಿವೆ. ಇವುಗಳನ್ನು ಹತ್ತಿಕ್ಕುವಲ್ಲಿ ಬಿಜೆಪಿ ಸಕರ್ಾರ ಸಂಪೂರ್ಣ ವಿಫಲವಾಗಿದೆ. ಜಾತಿ ವಿಷಬೀಜ ಬಿತ್ತುವ ಕೆಲಸದಲ್ಲಿ ತೊಡಗಿದೆ ಎಂದು ಕಿಡಿಕಾರಿದರು.

    ರಾಜಸ್ಥಾನದಲ್ಲಿ ದಲಿತ ವಿದ್ಯಾಥರ್ಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಶಿಕ್ಷಕನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಬೇಡ ಜಂಗಮರಿಗೆ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ಅಧಿಕಾರಿಗಳು ಹಾಗೂ ಪಡೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸೆಡೋಳ ಹಾಗೂ ಜನತಾನಗರ ದಲಿತರ ಸಮಸ್ಯೆಗಳನ್ನು ಜಿಲ್ಲಾಡಳಿತ ಇತ್ಯರ್ಥಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಪತ್ರವನ್ನು ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ಸಲ್ಲಿಸಲಾಯಿತು.

    ಒಕ್ಕೂಟದ ತಾಲೂಕು ಅಧ್ಯಕ್ಷ ಲಕ್ಷ್ಮೀಪುತ್ರ ಮಾಳಗೆ, ಉಪಾಧ್ಯಕ್ಷರಾದ ಗೌತಮ ಚವ್ಹಾಣ್ ಸೆಡೋಳ, ಅನೀಲ ದೊಡ್ಡಿ, ಶೇಖ್ ಮಕ್ಸೂದ್, ಪ್ರಧಾನ ಕಾರ್ಯದಶರ್ಿ ಗೌತಮ ಪ್ರಸಾದ, ಪ್ರಮುಖರಾದ ಜಗದೇವಪ್ಪ ಕಾಪರ್ೆಂಟರ್, ಕೈಲಾಸ ಮೇಟಿ, ಗಣಪತಿ ಅಷ್ಟೂರೆ, ಹಣಮಂತರಾವ ಕಾಂಬಳೆ, ಸುರೇಶ ಘಾಂಗ್ರೆ, ಬಾಬು ಟೈಗರ್, ಮಲ್ಲಿಕಾಜರ್ುನ ಮಹೇಂದ್ರಕರ್, ಡಾ.ಅರುಣ ಕುರಣೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts