More

    ದೈಹಿಕ ಸದೃಢತೆಗೆ ಕ್ರೀಡೆಗಳು ಪೂರಕ

    ಕೊಡೇಕಲ್ : ಆರೋಗ್ಯಕರ ಜೀವನ ಮತ್ತು ದೈಹಿಕ ಸದೃಢತೆಗೆ ಕ್ರೀಡೆಗಳು ಪೂರಕವಾಗಿವೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಗದ್ದೆಪ್ಪ ಪೂಜಾರಿ ಹೇಳಿದರು.

    ದಸರಾ ಹಬ್ಬದ ನಿಮಿತ್ತ ಬೆಳ್ಳಿಗುಂಡ ತಾಂಡಾದಲ್ಲಿ ಗುರುವಾರ ಹಮ್ಮಿಕೊಂಡ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಗೆದ್ದ ತೋಳದಿನ್ನಿ ಗ್ರಾಮದ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪ್ರತಿ ಕ್ರೀಡಾಪಟು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು. ಸೋಲು-ಗೆಲುವು ಸಾಮಾನ್ಯ ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ ಎಂದರು.

    ದೇಸಿ ಕ್ರೀಡೆಯಾಗಿರುವ ಕಬಡ್ಡಿ ಪಂದ್ಯಾವಳಿ ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಮೂಲಕ ಉತ್ತೇಜನ ನೀಡುವುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

    ಈ ಕ್ರೀಡಾಕೂಟದಲ್ಲಿ ೨೮ ತಂಡಗಳು ಭಾಗವಹಿಸಿದ್ದರು. ಪೈನಲ್ ಪಂದ್ಯದಲ್ಲಿ ರೋಚಕ ಕಾದಾಟ ನಡೆಸಿದ ತೋಳದಿನ್ನಿ ತಂಡ ಪ್ರಥಮ ಬಹುಮಾನ ಪಡೆದರೆ, ಬೆಳ್ಳಿಗುಂಡ ತಾಂಡಾ ದ್ವಿತೀಯ ಬಹುಮಾನ ಪಡೆಯಿತು. ದೇವರಗಡ್ಡಿ ತಂಡ ತೃತೀಯ ಹಾಗೂ ಬೆಳ್ಳಿಗುಂಡ ತಾಂಡಾ ಬಬಲುಗೌಡ ಅಭಿಮಾನಿ ತಂಡ ನಾಲ್ಕನೇ ಬಹುಮಾನ ಪಡೆದವು.

    ಪ್ರಮುಖರಾದ ಹುಲಗಪ್ಪ ಬಿರಾದಾರ, ಗ್ರಾ.ಪಂ ಮಾಜಿ ಅಧ್ಯಕ್ಷ ಹನುಮಗೌಡ, ಪ್ರಮುಖರಾದ ಲಕ್ಷö್ಮಣ ಎಸ್. ರಾಠೋಡ, ಮಾನಪ್ಪ ಎಚ್. ಚವ್ಹಾಣ, ತುಕರಾಮ, ಮಾನಪ್ಪ ಭೀಮಪ್ಪ, ಶಂಕರ ಪೂಜಾರಿ, ಅಚ್ಚಪ್ಪಗೌಡ, ಲಕ್ಷö್ಮಣ ಜಾದವು, ತಿರುಪತಿ, ನಿರ್ಣಾಯಕರಾದ ದೇವರಾಜ, ದೇವಣ್ಣ ಸೇರಿದಂತೆ ತಾಂಡಾದ ಗುರು, ಹಿರಿಯರು, ಯುವಕರು, ಕ್ರೀಡಾಪಟುಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts