More

    ದೈಹಿಕ, ಮಾನಸಿಕ ಬೆಳವಣಿಗೆಗೆ ಅಯೋಡಿನ್ ಅಗತ್ಯ; ಕೊರತೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ

    ಶಿಕಾರಿಪುರ: ಅಯೋಡಿನ್ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಗತ್ಯವಾದುದು ಎಂದು ವೈದ್ಯಾಧಿಕಾರಿ ಡಾ. ವಿನುತಾ ತಿಳಿಸಿದರು.
    ಪಟ್ಟಣದ ಕುಮದ್ವತಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಅಯೋಡಿನ್‌ನ ಮಹತ್ವ ಸಾರುವ ಮತ್ತು ಅಯೋಡಿನ್‌ಯುಕ್ತ ಆಹಾರ ಸೇವನೆ ಉತ್ತೇಜಿಸುವ ದೃಷ್ಟಿಯಿಂದ ವಿಶ್ವ ಅಯೋಡಿನ್ ಕೊರತೆ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ ಎಂದರು
    ನಿತ್ಯ ನಾವು ಸೇವಿಸುವ ಆಹಾರದಲ್ಲಿಯೇ ಅಯೋಡಿನ್ ಇರುತ್ತದೆ. ಆದರೆ ಇತ್ತೀಚೆಗೆ ಬದಲಾದ ಆಹಾರ ಪದ್ಧತಿಯಿಂದ ಕೆಲವರಲ್ಲಿ ಅಯೋಡಿನ್ ಕೊರತೆ ಕಂಡು ಬರುತ್ತಿದೆ. ಅಯೋಡಿನ್ ಅಂಶವುಳ್ಳ ಮಣ್ಣಿನಲ್ಲಿ ಬೆಳೆದ ಆಹಾರ ಪದಾರ್ಥಗಳ ಉಪಯೋಗ ಮಾಡುವುದರಿಂದ ಅಯೋಡಿನ್ ದೇಹಕ್ಕೆ ಸಿಗುತ್ತದೆ. ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಮತ್ತು ಮಾನಸಿಕ ವಿಕಲತೆ, ಅಂಗಾಂಗಗಳ ಕುಂಠಿತ ಬೆಳವಣಿಗೆ, ಕಿವುಡು ಹಾಗೂ ಮೂಗತನ, ಮೆಳ್ಳೆಗಣ್ಣು, ಕುಬ್ಜತ್ವ, ನಡೆದಾಡಲು ತೊಂದರೆ ಪಡಬೇಕಾದ ಸಮಸ್ಯೆಗಳು ಉಂಟಾಗುತ್ತವೆ ಎಂದು ವಿವರಿಸಿದರು.
    ವಯಸ್ಕರಲ್ಲಿ ಅಯೋಡಿನ್ ಕೊರತೆ ಉಂಟಾದರೆ ನಿಶಕ್ತಿ, ಕಾರ್ಯನಿರ್ವಹಣೆಯಲ್ಲಿ ವೆಫಲ್ಯತೆ ಹಾಗೂ ಗಳಗಂಡ ರೋಗ (ಕತ್ತಿನ ಮುಂಭಾಗದಲ್ಲಿ ಗ್ರಂಥಿ ಊತ)ಗಳನ್ನು ಬಾಧಿಸಲಿದೆ. ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆ ಉಂಟಾದರೆ ಪದೇಪದೆ ಗರ್ಭಪಾತವಾಗುವುದು, ಸಂತಾನೋತ್ಪತ್ತಿಯ ತೊಂದರೆ, ಅಂಗವಿಕಲತೆ, ಬುದ್ಧಿಮಾಂದ್ಯತೆ ಇರುವ ಮಕ್ಕಳು ಹುಟ್ಟುವ ಸಾಧ್ಯತೆ ಇದೆ. ಪ್ರತಿಯೊಬ್ಬರು ನಿತ್ಯದ ಆಹಾರದಲ್ಲಿ ಅಯೋಡಿನ್ ಅಂಶ ಒಳಗೊಂಡಿರುವ ಉಪ್ಪನ್ನು ಬಳಸುವುದರಿಂದ ಕೊರತೆಯನ್ನು ನೀಗಿಸಬಹುದು. ಎಂದರು
    ಶಾಲೆಯ ಆಡಳಿತಾಧಿಕಾರಿ ಕೆ.ಆರ್.ದಯಾನಂದ್ ಮಾತನಾಡಿ, ಅಯೋಡಿನ್ ಎಂಬುದು ಸೂಕ್ಷ್ಮ ಪೌಷ್ಟಿಕಾಂಶವಾಗಿದ್ದು, ಮಾನವನಿಗೆ ಅವಶ್ಯವಾದ ಪ್ರಕೃತಿದತ್ತವಾದ ಧಾತುವಾಗಿದೆ. ಥೈರಾಯ್ಡ ಗ್ರಂಥಿಸ್ರವದ ಅವಶ್ಯಕ ಅಂಶವಾಗಿದೆ. ಸಹಜ ಬೆಳವಣಿಗೆಗೆ, ದಷ್ಟ-ಪುಷ್ಟವಾಗಿರಲು, ಮೆದುಳು ಹಾಗೂ ದೇಹಗಳೆರಡೂ ಕ್ರಿಯಾಶೀಲವಾಗಿರಲು ಅಯೋಡಿನ್ ಅವಶ್ಯಕ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts