More

    ದೈಹಿಕ ಕಸರತ್ತಿನಿಂದ ಆರೋಗ್ಯ ವೃದ್ಧಿ

    ಹುಕ್ಕೇರಿ, ಬೆಳಗಾವಿ: ಸೈಕ್ಲಿಂಗ್ ಅಥವಾ ನಡಿಗೆಯಂತಹ ದೈಹಿಕ ವ್ಯಾಯಾಮಗಳಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.

    ಪಟ್ಟಣದ ಹಳೆತಹಸೀಲ್ದಾರ್ ಕಚೇರಿಯಲ್ಲಿ ಫಿಟ್ ಇಂಡಿಯಾ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ಸೈಕ್ಲಿಂಗ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪಡೆಯಬಹುದು. ಪಾಲಕರು ಮಕ್ಕಳನ್ನು ಚಿಕ್ಕಂದಿನಿಂದಲೇ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಬೇಕು ಎಂದರು. ಸಿಪಿಐ ಎಂ.ಎಂ.ತಹಸೀಲ್ದಾರ್ ಮಾತನಾಡಿ, ಮಕ್ಕಳು ಶಾಲಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸೀಮಿತರಾಗದೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

    ತಾಲೂಕು ಮಟ್ಟದದಲ್ಲಿ ಶಾಲಾ ಬಾಲಕರಿಗೆ 5 ಕಿಮೀ ಹಾಗೂ ಬಾಲಕಿಯರಿಗೆ 3 ಕಿಮೀ ಸೈಕ್ಲಿಂಗ್ ಸ್ಪರ್ಧೆ ಜರುಗಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.

    ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಶೀತಲ ಬ್ಯಾಳಿ, ಪುರಸಭೆ ಸದಸ್ಯ ರಾಜು ಮುನ್ನೋಳಿ, ಸವಿತಾ ಏಣಗಿಮಠ, ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ, ಮಾರಾಟ ವ್ಯವಸ್ಥಾಪಕ ಜಯಾನಂದ, ಡಾ.ಚಂದ್ರಶೇಖರ ಸಂಬಾಳ, ಮಂಜುನಾಥ ಹಗೆದಾಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts