More

    ದೇಸಿಯ ಕ್ರೀಡೆಗಳಿಗೆ ಒಲವು ತೋರಿಸಿ

    ಯಾದಗಿರಿ: ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಸಮಾಜದಲ್ಲಿ ಸಾಮರಸ್ಯ ಹೆಚ್ಚಾಗಲಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ ತಿಳಿಸಿದರು.
    ಗುರುವಾರ ವಡಿಗೇರಾ ತಾಲೂಕಿನ ಹಯ್ಯಾಳ (ಬಿ) ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತ ಆಯೋಜಿಸಿದ್ದ ಗ್ರಾಮೀಣ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಖರ್ಚಿಲ್ಲದೆ ದೈಹಿಕ ಕಸರತ್ತು ನೀಡುವ ಉತ್ತಮ ವ್ಯಾಯಾಮದ ಮಾರ್ಗಗಳಾಗಿವೆ. ಇಂದು ಕಬಡ್ಡಿ ಕೇವಲ ಹಳ್ಳಿಗೆ ಸೀಮಿತವಾಗದೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿ ಪಡೆದ ಆಟವಾಗಿದೆ ಎಂದರು.

    ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ ಯುವ ಜನತೆ ಕ್ರೀಡೆಗಳಿಂದ ವಿಮುಖರಾಗುತ್ತಿರುವುದು ಖೇದಕರ ಸಂಗತಿ. ದೇಶಿ ಕ್ರೀಡೆಗಳಿಗೆ ಹೆಚ್ಚು ಒಲವು ತೋರುವ ಮೂಲಕ ದೇಶದ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ, ಬೆಳಸಬೇಕಿದೆ. ಆಟ ಎಂದರೆ ಸೋಲು ಗೆಲವು ಸಾಮಾನ್ಯ. ಗೆದ್ದವರು ಹಾಗೂ ಸೋತವರು ಮತ್ತಷ್ಟು ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

    ಬಾಲುಗೌಡ ಮುಸ್ತಾಜೀರ್, ಬಸ್ಸು ಗೌಡ ಮುಸ್ತಾಜೀರ್, ಲಿಂಗರಾಜ ಬೋಳಾರಿ, ಚಂದ್ರಶೇಖರ್ ಸಾಹುಕಾರ, ಚನ್ನಪ್ಪಗೌಡ ಬೂದೂರ, ಚನ್ನ್ನಾರೆಡ್ಡ ದೇಸಾಯಿ, ಭೀಮರೆಡ್ಡಿ ದೇಸಾಯಿ, ದೇವಪ್ಪ ಬಾಗ್ಲಿ, ನಾಗಪ್ಪ ಬಾಗ್ಲಿ, ನಾಗಪ್ಪ ಯಾದಗಿರಿ, ಮಲ್ಲು ಸಾಹುಕಾರ, ಸೋಮು ಕನರ್ಾಲ್, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts