More

    ದೇಶ, ಯೋಧರನ್ನು ಗೌರವಿಸಿ

    ಸವಣೂರ: ಯುವ ಜನತೆ ಸಾಮಾಜಿಕ ಚಿಂತನೆಯೊಂದಿಗೆ ಜೀವನ ರೂಪಿಸಿಕೊಂಡರೆ ಮಾತ್ರ ರಾಷ್ಟ್ರಭಕ್ತಿ ಹೊಂದಲು ಸಾಧ್ಯ. ಪ್ರತಿಯೊಬ್ಬರೂ ಮಾತೃಭೂಮಿಗೆ, ಮಹಿಳೆಯರಿಗೆ ಹಾಗೂ ಯೋಧರಿಗೆ ಗೌರವ ನೀಡಬೇಕು ಎಂದು ನಿವೃತ್ತ ಯೋಧ ಬಸವರಾಜ ಬಾಳಿಕಾಯಿ ಹೇಳಿದರು.

    ಕಾರ್ಗಿಲ್ ವಿಜಯೋತ್ಸವದ 21ನೇ ವರ್ಷಾಚರಣೆ ಹಾಗೂ ಹುತಾತ್ಮ ವೀರಯೋಧರ ಸ್ಮರಣೆ ಅಂಗವಾಗಿ ನಿರಾಮಯ ಫೌಂಡೇಷನ್ ಹುಬ್ಬಳ್ಳಿ, ಜೆಸಿಐ ನಮ್ಮ ಸವಣೂರು ಘಟಕ ಹಾಗೂ ಬಸವರಾಜ ಬೊಮ್ಮಾಯಿ ಅಭಿಮಾನಿ ಯುವ ಬಳಗ ಸವಣೂರ ವತಿಯಿಂದ ದೊಡ್ಡ ಹುಣಸೇಕಲ್ಮಠದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ರಕ್ತ ತಪಾಸಣೆ ಹಾಗೂ ಸ್ವಯಂ ಪ್ರೇರಣೆಯ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ‘ಯೋಧರಾಗಿ ಭಾರತಾಂಬೆಯ ಸೇವೆ ಸಲ್ಲಿಸಿದ ನಾವೇ ಧನ್ಯರು. ರಕ್ತದಾನದ ಮೂಲಕ ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

    ದೊಡ್ಡ ಹುಣಸೇಕಲ್ಮಠದ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೆಸಿಐ ನಮ್ಮ ಸವಣೂರು ಘಟಕದ ಉಪಾಧ್ಯಕ್ಷ ಡಾ. ಪ್ರಕಾಶ ಮುರಡಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿಧರ ಹೊಸಳ್ಳಿ ಉಪನ್ಯಾಸ ನೀಡಿದರು. ಘಟಕದ ಅಧ್ಯಕ್ಷ ವಿದ್ಯಾಧರ ಕುತನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿ.ಎಂ. ಹಿರೇಮಠ, ಮಲ್ಲಾರಪ್ಪ ತಳ್ಳಳ್ಳಿ, ಪ್ರದೀಪ ಮುಳ್ಳೂರ, ಗಂಗಾಧರ ಬಾಣದ, ಶಿವಾನಂದ ಮ್ಯಾಗೇರಿ, ಮಹೇಶ ಮುದಗಲ್, ಚನ್ನಬಸಯ್ಯ ದುರ್ಗದಮಠ, ಧರೆಪ್ಪಗೌಡ ಪಾಟೀಲ, ಪ್ರವೀಣ ಬಾಲೇಹೊಸೂರ, ಸಮೀತ ಕೆಮ್ಮಣಕೇರಿ, ವಿನಯ ಬುಶೆಟ್ಟಿ, ಪ್ರತೀಕ ಕೋಳಕೆರ, ಮಹೇಶ ಜಡಿ, ಮಲ್ಲಿಕಾರ್ಜುನ ಕಳ್ಳಿಮನಿ ಇತರರು ಪಾಲ್ಗೊಂಡಿದ್ದರು. 27 ಯುವಕರು ರಕ್ತದಾನ ಮಾಡಿದರು. 76 ಜನರ ಉಚಿತ ರಕ್ತ ತಪಾಸಣೆ ನಡೆಸಲಾಯಿತು. ಸಂತೋಷ ಕೆಂಚನಗೌಡ್ರ ಹಾಗೂ ಪ್ರಕಾಶ ಗಾಣಗೇರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts