More

    ದೇಶ ಕಟ್ಟುವ ಜವಾಬ್ದಾರಿ ಯುವಜನರ ಮೇಲಿದೆ

    ಶೃಂಗೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪಾರಂಪರಿಕವಾಗಿ ಬಂದ ಗ್ರಾಮೀಣ ಪ್ರದೇಶದ ಆಟ, ಕಲೆ ಇತ್ಯಾದಿಗಳು ಪ್ರಸ್ತುತ ಅನಾವರಣಗೊಳ್ಳುತ್ತಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.</p><p>ತಾಲೂಕಿನ ಕವಿಲುಕುಡಿಗೆಯಲ್ಲಿ ಶನಿವಾರ ತಾಲೂಕು ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಸೇವಾ ಪಾಕ್ಷಿಕ ಕ್ಷೇತ್ರ ಮಟ್ಟದ ಕಮಲ ಕ್ರೀಡೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಬ್ರಿಟಿಷರು ಭಾರತಕ್ಕೆ ಪ್ರವೇಶಿಸುವ ಮೊದಲು ಸ್ವಂತಿಕೆ ಹಾಗೂ ಸ್ವಾಭಿಮಾನವಿತ್ತು. ಬ್ರಿಟಿಷರ ಅಳ್ವಿಕೆಯಲ್ಲಿ ಅದು ನಿಮೂಲನೆಯಾಗಿದೆ. ಪ್ರಸ್ತುತ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳ ಮೂಲಕ ದೇಶದ ಜನರ ಅಂತಃಸತ್ವವನ್ನು ಬಡಿದೆಬ್ಬಿಸಿದ್ದಾರೆ. ದೇಶವಿರೋಧಿ ಷಡ್ಯಂತ್ರವನ್ನು ಕ್ಷಿಪ್ರಗತಿಯಲ್ಲಿ ಅಂತ್ಯಗೊಳಿಸಬೇಕಿದೆ. ಭಾರತದ ಮಣ್ಣಿಗೆ ಸರ್ವರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಭಾರತದಲ್ಲಿ ಯುವಪಡೆಯ ಸಾಮರ್ಥ್ಯ ದೊಡ್ಡದು. ಅವರು ದೇಶದ ಉನ್ನತಿಗಾಗಿ ಶ್ರಮಿಸಬೇಕು ಎಂದರು.

    ಒಬಿಸಿ ಮೋರ್ಚಾ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಮಾತನಾಡಿ, ಯುವಕರು ನಿರಂತರ ಕ್ರಿಯಾಶೀಲರಾಗಿರಬೇಕು. ಪಕ್ಷದ ಎಲ್ಲ ಚಟುವಟಿಕೆಯಲ್ಲಿ ಭಾಗವಹಿಸಿ ಸಂಘಟನೆಗೆ ಶ್ರಮಿಸಬೇಕು. ಕ್ರೀಡೆ ದೈಹಿಕ ಹಾಗೂ ಮಾನಸಿಕ ದೃಢತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

    ಸಿಎಂ ಮುಖ್ಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ಆಟೋಟ ಸ್ಪರ್ಧೆಗಳಿಂದ ಸಾಂಘಿಕ ಮನೋಭಾವ ಬೆಳೆಯುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿ. ಯುವಕರು ಭಾರತದ ಶಕ್ತಿಯಾಗಿ ಬೆಳೆದರೆ ಮಾತ್ರ ದೇಶ ಬೆಳಗಲು ಸಾಧ್ಯ ಎಂದರು. ಕಮಲ ಕ್ರೀಡೋತ್ಸವದಲ್ಲಿ ಕೆಸರಲ್ಲಿ ವಾಲಿಬಾಲ್, ಹಗ್ಗಜಗ್ಗಾಟ ಮತ್ತಿತರ ಸ್ಪರ್ಧೆ ಏರ್ಪಡಿಸಲಾಗಿತ್ತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts