More

    ದೇಶ ಆಳುವ ವರ್ಗವಾಗಲಿ


    ಕಟ್ಟೆಮಳಲವಾಡಿ: ವರ್ಷಕ್ಕೊಮ್ಮೆ ಅಂಬೇಡ್ಕರ್ ಸ್ಮರಿಸಿ ಸಂಭ್ರಮಿಸುವುದರಿಂದ ಸಮಾಜ ಪರಿವರ್ತನೆಯಾಗುವುದಿಲ್ಲ, ಬದಲಾಗಿ ನಾವೂ ದೇಶ ಆಳುವ ವರ್ಗವಾಗಬೇಕು ಎಂದು ಮೈಸೂರು ನಗರಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ ಅಭಿಪ್ರಾಯಪಟ್ಟರು.


    ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


    ಇತ್ತೀಚಿನ ದಿನಗಳಲ್ಲಿ ಜಾತಿಗೊಂದು ಪ್ರತಿಮೆ, ಭವನ ನಿರ್ಮಾಣವಾಗುತ್ತಿವೆ, ಆದರೆ ಗೌರವಯುತವಾಗಿ ಅಂಬೇಡ್ಕರ್ ಅವರನ್ನು ಇದುವರೆಗೂ ಯಾರೂ ಒಪ್ಪಿಕೊಂಡಿಲ್ಲ. ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಸಂವಿಧಾನದ ಆಶಯಗಳು ಉಳಿಯುತ್ತವೆಯೇ ಎಂಬ ಚರ್ಚೆ ನಮ್ಮ ಮುಂದಿದ್ದು, ಅಂದಿನಿಂದ ಇಂದಿನವರೆಗೆ ಪ್ರಬುದ್ಧ ರಾಜಕಾರಣವನ್ನು ನೋಡಲಾಗಿಲ್ಲ ಎಂದರು.


    ಈಗಿನ ಆಡಳಿತ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು ಮಠಗಳನ್ನು ಸ್ಥಾಪಿಸಿ ಅಲ್ಲಿ ಜನರನ್ನು ಸೇರಿಸಿ ಮನಃಪರಿವರ್ತನೆ ಮಾಡುತ್ತಿದೆ. ಈಗಾಗಲೇ ಸ್ಕಾಲರ್‌ಷಿಪ್, ಸರ್ಕಾರಿ ನೌಕರಿ ಕಡಿತಗೊಳಿಸಿದೆ, ಇದು ಗುಲಾಮಗಿರಿ ರಾಜಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಅಂಬೇಡ್ಕರ್ ಆಶಯದಂತೆ ಮತ ಮಾರಾಟ ಮಾಡಿಕೊಳ್ಳಬೇಡಿ, ಮುಂದಿನ ದಿನಗಳಲ್ಲಿ ಬದಲಾವಣೆ ತರಬೇಕಿದ್ದು, ಎಲ್ಲ ಸಮುದಾಯಗಳು ಸಂಘಟಿತರಾಗಿ ಸಂವಿಧಾನ ಉಳಿಸಲು ಬದ್ಧರಾಗೋಣ ಎಂದರು.


    ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಆಯ್ಕೆಯಾದ ನಂತರ 2 ವರ್ಷ ಕರೊನಾ ಮತ್ತೆ ಬಿಜೆಪಿ ಸರ್ಕಾರ ಬಂದು ಅನುದಾನ ತರಲು ತೊಡಕಾಗಿದೆ.
    ಈ ಗ್ರಾಮದಲ್ಲಿ ಅಂಬೇಡ್ಕರ್ ಭವನ ಇದ್ದುದ್ದರಿಂದ ಮತ್ತೆ ಅನುದಾನ ನೀಡಲು ಬರುವುದಿಲ್ಲ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅಂಬೇಡ್ಕರ್ ಭವನಕ್ಕೆ ಗಾವಡಗೆರೆ ಹೋಬಳಿಗೆ 50 ಸಾವಿರ ರೂ.ನೀಡಲಾಗಿತ್ತು. ಅಲ್ಲಿ ಸ್ಥಳ ಇಲ್ಲದೆ ಅನುದಾನ ಹಾಗೆಯೇ ಉಳಿದಿದೆ ಆ ಹಣವನ್ನು ಈ ಗ್ರಾಮಕ್ಕೆ ಹಿಂದಿರುಗಿಸಲು ಕ್ರಮ ಕೈ ಗೋಳ್ಳುತ್ತೇನೆ, ಜತೆಗೆ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಕಾಮಗಾರಿ ಮುಗಿಯುವವರೆಗೆ ನಿಮ್ಮ ಜತೆ ನಾನಿರುತ್ತೇನೆ ಎಂದು ಭರವಸೆ ನೀಡಿದರು.


    ಬಿಆರ್‌ಸಿ ಸಂತೋಷ್ ಕುಮಾರ್ ಮಾತನಾಡಿ,
    ಸರ್ಕಾರಿ ನೌಕರರ ಬಳಗದಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ 10 ಅಡಿ ಪಂಚಲೋಹದ ಪ್ರತಿಮೆಯನ್ನು ಕೊಡುಗೆಯಾಗಿ ನೀಡಲು ತೀರ್ಮಾನಿಸಿದ್ದು, ಉಳಿದ ಕಾಮಗಾರಿಗಳಿಗೆ ಪ್ರತಿಷ್ಠಾಪನಾ ಸಮಿತಿ ವಹಿಸಿಕೊಂಡಿದ್ದು ಈ ಸ್ಥಳವನ್ನು ಜ್ಞಾನಾಲಯದ ಕೇಂದ್ರಮಾಡುವ ಕನಸು ನಮ್ಮದಾಗಿದೆ ಎಂದರು.


    ಕೆ.ಆರ್.ನಗರ ತಾಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚುತಾನಂದ ಅವರು ಅಂಬೇಡ್ಕರ್ ಪ್ರತಿಮೆ ನಿರ್ಮಣಕ್ಕೆ 10 ಲಕ್ಷ ರೂ.ನೀಡುವುದಾಗಿ ಘೋಷಿಸಿದರು.
    ಬೌದ್ದ ಗುರು ಕಲ್ಯಾಣ ಶ್ರೀಬಂತೇಜಿ ಆಶೀರ್ವಚನ ನೀಡಿದರು.


    ಜಿ.ಟಿ.ದೇವೇಗೌಡ, ವಿಜಯ ಶಂಕರ್, ಕೆಂಪನಾಯ್ಕ, ಹರಿಹರ ಆನಂದಸ್ವಾಮಿ, ಸೋಮಶೇಖರ್, ದೊಡ್ಡಹೆಜ್ಜೂರು ರಮೇಶ್, ಗಣೇಶ್‌ಕುಮಾರ್ ಸ್ವಾಮಿ, ದೇವರಾಜ್ ಒಡೆಯರ್, ಅಭಿಯೋಜಕರಾದ ರಮೇಶ್ ಬಾಬು ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts