More

    ದೇಶದಲ್ಲಿ ಭಾವೈಕ್ಯತೆ ಮೂಡಿಸುವ ಸ್ಕೌಟ್ಸ್-ಗೈಡ್ಸ್

    ಬೆಳಗಾವಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಇದರಿಂದ ದೇಶದಲ್ಲಿ ಭಾವೈಕ್ಯತೆ ಬೆಳೆಯಲು ಸಹಾಯವಾಗುತ್ತಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಹೇಳಿದರು.

    ನಗರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳಗಾವಿ ಜಿಲ್ಲಾ ಸಂಸ್ಥೆಯ ನವೀಕೃತ ಜಿಲ್ಲಾ ಕೇಂದ್ರದ ಕಾರ್ಯಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕಾದರೆ ಅನೇಕ ನಾಯಕರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರಲ್ಲಿ ಭಾರತದ ಉಪ ರಾಷ್ಟ್ರಪತಿಯಾಗಿದ್ದ ಬಿ.ಡಿ.ಜತ್ತಿ ಅವರು ಸ್ಕೌಟ್ಸ್-ಗೈಡ್ಸ್‌ಗೆ ಅಡಿಪಾಯ ಹಾಕಿದವರು ಎಂದರು.
    ಧಾರವಾಡ ಅಪರ ಆಯುಕ್ತರ ಕಾರ್ಯಾಲಯದ ಜಂಟಿ ನಿರ್ದೇಶಕ, ಸಹಾಯಕ ರಾಜ್ಯ ಆಯುಕ್ತ ಗಜಾನನ ಮಣ್ಣಿಕೇರಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕಾರಿಯಾಗಲಿದೆ. ಅಖಂಡ ಬೆಳಗಾವಿ ಜಿಲ್ಲೆಗೆ ಬಹುದೊಡ್ಡ ಕಚೇರಿ ಸುಂದರವಾಗಿ ನವೀಕೃತಗೊಂಡು ಜಿಲ್ಲಾ ಕೇಂದ್ರ ಕಾರ್ಯಾಲಯದ ನಿರ್ಮಾಣವಾಗಲು ಪಿಜಿಆರ್ ಸಿಂಧ್ಯಾ ಅವರ ವಿಶೇಷ ಕಾಳಜಿಯಿಂದ ಸಾಧ್ಯವಾಗಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಹೊಣೆ ಎಲ್ಲ ಶಿಕ್ಷಕರ ಮೇಲಿದೆ ಎಂದು ಹೇಳಿದರು.

    ಮೂಡಬಿದಿರೆಯ ಅಂತಾ ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಉತ್ಸವದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಾದ ಮುಸ್ಕಾನ್ ಮುಲ್ಲಾ, ಶ್ರೀನಿವಾಸ, ಲಕ್ಷ್ಮೀ ಮಾಳಿ ಅನುಭವ ಹಂಚಿಕೊಂಡರು. ಡಿಡಿಪಿಐ ಮೋಹನಕುಮಾರ ಹಂಚಾಟಿ, ಬಿಇಒ ಎಸ್.ಪಿ.ದಾಸಪ್ಪನವರ, ಆರ್.ಸಿ.ಮುದಕನಗೌಡರ, ಆರ್.ಟಿ.ಬಳಿಗಾರ, ಎ.ಎನ್.ಪ್ಯಾಟಿ, ಎಸ್.ಸಿ.ಕರಿಕಟ್ಟಿ, ಎಂ.ಎನ್.ದಂಡಿನ, ಜಿ.ಬಿ. ಬಳಗಾರ, ಎ.ಜಿ.ಮಣ್ಣಿಕೇರಿ, ಪಿ.ಬಿ.ಹಿರೇಮಠ, ಆರ್.ಎಂ.ಮಠದ ಇತರರಿದ್ದರು. ಪ್ರಭಾವತಿ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಿ.ಬಿ.ಅತ್ತಾರ ನಿರೂಪಿಸಿದರು. ವಿಠ್ಠಲ ಎಸ್.ಬಿ.ವಂದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts