More

    ದೇಶಕ್ಕಾಗಿ ಪ್ರಾಣ ಕೊಟ್ಟವರನ್ನು ಹೀರೊಗಳೆಂದು ಪರಿಗಣಿಸಿ

    ಹುಮನಾಬಾದ್: ಯುವಜನತೆ ದೇಶದ ಸ್ವಾತಂತ್ರೃಕ್ಕಾಗಿ ತ್ಯಾಗ, ಬಲಿದಾನಗೈದ ಅಪ್ಪಟ ದೇಶಭಕ್ತರನ್ನು ನಿಜವಾದ ಹೀರೊಗಳೆಂದು ಪರಿಗಣಿಸಬೇಕು ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವತರ್ಿ ಸೂಲಿಬೆಲೆ ಕರೆ ನೀಡಿದರು.

    ಪಟ್ಟಣದ ಥೇರ ಮೈದಾನದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಯುವಾ ಬ್ರಿಗೇಡ್ನಿಂದ ಹಮ್ಮಿಕೊಂಡಿರುವ ಸುಂದರ ಕಾಂಡ, ಸ್ವಾತಂತ್ರೃ ಶ್ರಾವಣ ಹಿನ್ನೆಲೆಯಲ್ಲಿ ಶನಿವಾರ ನಡೆದ ಭಾರತ ಮಾತೆಯ ಪಲ್ಲಕ್ಕಿ ಉತ್ಸವ ಹಾಗೂ ಕನ್ನಡ ತೇರು ಮೆರವಣಿಗೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಚಲನಚಿತ್ರದಲ್ಲಿನ ಹೀರೊ ನಿಜವಾದ ಹಿರೋ ಆಗಿರದೆ ಕೇವಲ ನಟನೆಗೆ ಮಾತ್ರ ಹೀರೊ ಆಗಿದ್ದಾರೆ ಎನ್ನುವುದು ಅರಿತುಕೊಳ್ಳಬೇಕು. ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರೃ ದೊರಕಿಸಿಕೊಡಲು ಲಕ್ಷಾಂತರ ದೇಶಭಕ್ತರು ಅನೇಕ ಕಠಿಣ ಸಂಕಷ್ಟಗಳನ್ನು ಎದುರಿಸುವುದರ ಜತೆಗೆ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಬಲಿದಾನದಿಂದಾಗಿ ಇಂದು ನಾವೆಲ್ಲರೂ 75ನೇ ಸ್ವಾತಂತ್ರೃ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ ಎಂದರು.

    ಪ್ರತಿಯೊಬ್ಬ ಯುವಕ ದೇಶಭಕ್ತಿ ಮೈಗೂಡಿಸಿಕೊಂಡು ಸದೃಢ ರಾಷ್ಟ್ರ ನಿಮರ್ಾಣಕ್ಕೆ ಟೊಂಕಕಟ್ಟಿ ನಿಲ್ಲಬೇಕು. ದೇಶ ಸುಭದ್ರವಾಗಿಡುವ ನಿಟ್ಟಿನಲ್ಲಿ ಮೊದಲು ನಾವು ನಮ್ಮ ಕನ್ನಡನಾಡು ಸುರಕ್ಷಿತವಾಗಿ ಇಟ್ಟುಕೊಳ್ಳಲು ಪ್ರತಿ ಕನ್ನಡಿಗನ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.

    ಸಾನ್ನಿಧ್ಯ ವಹಿಸಿದ ಸ್ಥಳೀಯ ಹಿರೇಮಠದ ಶ್ರೀ ರೇಣುಕಾಗಂಗಾಧರ ಶಿವಾಚಾರ್ಯರು, ಹಳ್ಳಿಖೇಡ (ಕೆ ) ಹಿರೇಮಠದ ಶ್ರೀ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ದೇಶದ ಶಕ್ತಿ ಯುವಜನತೆ. ಆದ್ದರಿಂದ ದುಶ್ಚಟಗಳಿಗೆ ಬಲಿಯಾಗದೆ, ಸಂಸ್ಕಾರಯುತ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ಹೊರ ಹೊಮ್ಮಬೇಕು. ಸ್ವಾತಂತ್ರೃ ದೊರಕಿಸಿಕೊಟ್ಟ ಮಹಾಪುರುಷರ ಜೀವನ ಚರಿತ್ರೆ ಅರಿತು ದೇಶ ರಕ್ಷಣೆಗಾಗಿ ಸದಾ ಸಿದ್ಧರಾಗಿರಬೇಕು ಎಂದರು.

    ಯುವಾ ಬ್ರಿಗೇಡ್ ಪ್ರಮುಖರಾದ ವರ್ಧಮಾನ ತ್ಯಾಗಿ, ಲಕ್ಷ್ಮೀಕಾಂತ ಹಿಂದೊಡ್ಡಿ ಇತರರಿದ್ದರು.

    ಭವ್ಯ ಮೆರಣಿಗೆಯ ವೈಭವ: ಯುವಾ ಬ್ರಿಗೇಡ್ನಿಂದ ಹಮ್ಮಿಕೊಂಡಿದ್ದ ಸುಂದರ ಕಾಂಡ, ಸ್ವಾತಂತ್ರೃ ಶ್ರಾವಣ ಕಾರ್ಯಕ್ರಮ ನಿಮಿತ್ತ ಭಾರತ ಮಾತೆಯ ಪಲ್ಲಕ್ಕಿ ಉತ್ಸವ ಹಾಗೂ ಕನ್ನಡ ತೇರು ಮೆರವಣಿಗೆ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಥೇರ ಮೈದಾನದ ವರೆಗೆ ವೈಭವದಿಂದ ಜರುಗಿತು. ಶ್ರೀ ರೇಣುಕಾಗಂಗಾಧರ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವತರ್ಿ ಸೂಲಿಬೆಲೆ ಸೇರಿದಂತೆ ಪ್ರಮುಖರೊಂದಿಗೆ ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ಕುಂಭ ಹೊತ್ತ ಮಹಿಳೆಯರು, ಸಾಲು ಸಾಲಾಗಿ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದ ಮಕ್ಕಳಿಂದ ರಾಷ್ಟ್ರಭಕ್ತಿ ಜಯ ಘೋಷಗಳು ಮೊಳಗಿದವು. ಡೊಳ್ಳು ಕುಣಿತ ಹಾಗೂ ಶಾಲಾ ಮಕ್ಕಳ ಕೋಲಾಟ ಕಣ್ಮನ ಸೆಳೆದವು. ಮೆರವಣಿಗೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಪಟ್ಟಣದ ಪ್ರಮುಖರು, ವ್ಯಾಪಾರಸ್ಥರು ನೀರು, ಬಾಳೆ ಹಣ್ಣು ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts