More

    ದೇಶಕ್ಕಾಗಿ ಒಗ್ಗಟ್ಟು ಪ್ರದರ್ಶನ ಮಾಡೋಣ

    ಮುದ್ದೇಬಿಹಾಳ: ದೇಶ ಅಖಂಡವಾಗಿ ಉಳಿಯಬೇಕಾದರೆ ನಾವು ಜೇನು ಹುಳುವಿನಂತೆ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಎಲ್ಲವನ್ನೂ ಮರೆತು ದೇಶಾಭಿಮಾನ ಇಟ್ಟುಕೊಂಡು ಬದುಕಬೇಕು. ಮೀಸಲಾತಿ ಮುಂದುವರಿಸುವ ಅವಶ್ಯಕತೆ ಇದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

    ತಾಲೂಕಿನ ಹಡಲಗೇರಿ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸ್ವಾತಂತ್ರೃ ದೊರೆತು 75 ವರ್ಷಗಳಾದರೂ ಎಲ್ಲೆಡೆ ತಾರತಮ್ಯ ಇಂದಿಗೂ ಇದೆ. ಇದನ್ನು ನಿವಾರಿಸಲು ಸಂವಿಧಾನದ ಪ್ರತಿಯೊಂದು ಶಬ್ಧದ ಮೂಲ ಅರ್ಥವನ್ನು ನಾವು ತಿಳಿದುಕೊಳ್ಳಬೇಕು. ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತರುವಂಥ ಶಾಸನಗಳು ಆಗಬೇಕು. ಸಿದ್ದರಾಮಯ್ಯ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ 5 ವಾಗ್ದಾನಗಳನ್ನು ಅನುಷ್ಠಾನಕ್ಕೆ ತಂದಿದ್ದು ಸ್ಮರಣೀಯ ಎಂದರು.

    ಶಿಕ್ಷಕ ಬಿ.ಎಂ.ಗುಡಗುಂಟಿ ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ರಾಯನಗೌಡ ತಾತರಡ್ಡಿ, ತಾಪಂ ಇಒ ಯುವರಾಜ ಹನಗಂಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ತಾಪಂ ಎಡಿ ಪಿ.ಎಸ್.ಕಸನಕ್ಕಿ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಪರಪ್ಪಗೋಳ, ಗ್ರಾಪಂ ಸದಸ್ಯರಾದ ಹಣಮಂತ ತಳ್ಳಿಕೇರಿ, ದ್ಯಾಮಕ್ಕ ಹರಿಂದ್ರಾಳ, ಪರಶುರಾಮ ತಳವಾರ, ದೇವಮ್ಮ ವಾಲಿಕಾರ, ಯಲ್ಲಮ್ಮ ಚಲವಾದಿ, ಮುಖಂಡರಾದ ಯಲ್ಲಪ್ಪ ಚಲವಾದಿ ಇತರರಿದ್ದರು.

    ಶಿಕ್ಷಕ ಎಂ.ಎ.ತಳ್ಳಿಕೇರಿ ಸ್ವಾಗತಿಸಿ ನಿರೂಪಿಸಿದರು. ಪಿ.ಎಸ್.ಕಸನಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ ಲಮಾಣಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಜಾಗೃತಿ ಜಾಥಾ ಎಲ್ಲೆಡೆ ಸಂಚರಿಸಿತು. ಶರಣರು, ದಾರ್ಶನಿಕರ ಛದ್ಮವೇಷಧಾರಿಗಳಾಗಿ ವಿದ್ಯಾರ್ಥಿಗಳು ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts