More

    ದೇವಾಲಯದ ಕಟ್ಟಡ ಉದ್ಘಾಟನೆ 14ರಂದು

    ಬೆಳಗಾವಿ: ಕಣಬರ್ಗಿಯ ಸಿದ್ಧೇಶ್ವರ ದೇವಾಲಯದ ನವೀಕೃತ ಕಟ್ಟಡದ ಉದ್ಘಾಟನೆ, ವಾಸ್ತುಶಾಂತಿ ಹಾಗೂ ಕಳಸಾರೋಹಣ ಸಮಾರಂಭ ಫೆ. 14ರಂದು ಜರುಗಲಿದೆ ಎಂದು ಮಾಜಿ ಮೇಯರ್ ಶಿವಾಜಿ ಸುಂಟಕರ ತಿಳಿಸಿದರು.

    ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 14ರಂದು ಬೆಳಗ್ಗೆ 6.30ರಿಂದ ಬೆಳಗ್ಗೆ 11 ಗಂಟೆವರೆಗೆ ನವಿಕೃತ ಸಿದ್ಧೇಶ್ವರ ದೇವಸ್ಥಾನದ ಕಟ್ಟಡದ ವಾಸ್ತುಶಾಂತಿ, ಕಳಸಾರೋಹಣ ಜರುಗಲಿದೆ. ಡಾ. ಅಲ್ಲಮಪ್ರಭು ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಡಾ. ಮಹಾಂತಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದೆ ಮಂಗಲ ಅಂಗಡಿ, ಶಾಸಕರಾದ ಅನಿಲ ಬೆನಕೆ, ಸತೀಶ್ ಜಾರಕಿಹೊಳಿ, ಅಭಯ ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಫಿರೋಜ್ ಸೇಠ್, ಬಿಜೆಪಿ ಮುಖಂಡ ಕಿರಣ ಜಾಧವ ಸೇರಿ ಇತರ ಗಣ್ಯರು ಪಾಲ್ಗೊಳ್ಳುವರು ಎಂದರು. ಮಧ್ಯಾಹ್ನ 12ರಿಂದ ಅನ್ನಪ್ರಸಾದ ಹಾಗೂ ಸಂಜೆ 4 ಗಂಟೆವರೆಗೆ ಅತಿಥಿಗಳ ಸತ್ಕಾರ ಸಮಾರಂಭ ಜರುಗಲಿದೆ ಎಂದರು.

    ಕಾರ್ಯಕ್ರಮದ ಹಿನ್ನೆಲೆಯಲ್ಲಿ ಫೆ. 12ರಂದು ಬೆಳಗ್ಗೆ 8 ಗಂಟೆಗೆ ಕಣಬರ್ಗಿ ಮಹಾಲಕ್ಷ್ಮೀ ದೇವಸ್ಥಾನದಿಂದ ಸಿದ್ಧೇಶ್ವರ ದೇವಸ್ಥಾನದವರೆಗೆ ಸಿದ್ಧೇಶ್ವರ ಕಳಸ ಮೆರವಣಿಗೆ ಹಾಗೂ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ಜರುಗಲಿದೆ. ಫೆ. 13ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಸಿದ್ಧೇಶ್ವರ ಮಂದಿರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಗಣಹೋಮ, ಸಂಜೆ 6ರಿಂದ 9ರ ವರೆಗೆ ದೇವಸ್ಥಾನ ಆವರಣದಲ್ಲಿ ರಾಕ್ಷೋಘ್ನ ಹೋಮ ಹಮ್ಮಿಕೊಳ್ಳಲಾಗಿದೆ. ವ್ಯವಸ್ಥಾಪಕ ಮಂಡಳಿ ಹಾಗೂ ಸಿದ್ದೇಶ್ವರ ಭಕ್ತ ಮಂಡಳಿ ಮತ್ತು ಕಣಬರ್ಗಿ ಗ್ರಾಮದ ಭಕ್ತರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದರು. ಅಪ್ಪಯ್ಯ ಬಿರ್ಜೆ, ರಾಘವೇಂದ್ರ ಪಾಟೀಲ, ಗುರುದೇವ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts