More

    ದೇವಸ್ಥಾನ ಜೀರ್ಣೋದ್ಧಾರಕ್ಕೆ 2.30 ಕೋಟಿ ರೂ.

    ನಿಪ್ಪಾಣಿ: ತಾಲೂಕಿನ ಅಪ್ಪಾಚಿವಾಡಿಯಲ್ಲಿ 2.30 ಕೋಟಿ ರೂ. ವೆಚ್ಚದಲ್ಲಿ ಶ್ರೀ ಹಾಲಸಿದ್ಧನಾಥ ಮಂದಿರದ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಅಪ್ಪಾಚಿವಾಡಿ ಗ್ರಾಮದ ಮಂದಿರ ಜೀರ್ಣೋದ್ಧಾರ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಜರಾಯಿ ಇಲಾಖೆಯಿಂದ ಹಾಲಸಿದ್ಧನಾಥ ಮಂದಿರ ಅಭಿವೃದ್ಧಿಪಡಿಸಲಾಗುವುದು. ಮಂದಿರದಲ್ಲಿ ಬೆಳ್ಳಿ ಪಲ್ಲಕ್ಕಿ ನಿರ್ಮಿಸುತ್ತಿದ್ದು, ಜೊಲ್ಲೆ ಕುಟುಂಬದಿಂದ ಶೇ.75 ವೆಚ್ಚ ಮಾಡಲಾಗುವುದು. ಉಳಿದ ಶೇ.25 ಹಣ ಭಕ್ತರು ನೀಡಿದ ಕಾಣಿಕೆಯಿಂದ ಕಲೆ ಹಾಕಲಾಗುವುದು ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಹಾಲಸಿದ್ಧನಾಥ ಮಂದಿರದ ಜೀರ್ಣೋದ್ಧಾರಕ್ಕಾಗಿ ರಾಜ್ಯ ಸರ್ಕಾರದಿಂದ 1.05 ಕೋಟಿ ರೂ. ಅನುಮೋದನೆಗೊಂಡಿದೆ. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ 1 ಕೋಟಿ ರೂ. ಮತ್ತು ಬೀರೇಶ್ವರ ಸಂಸ್ಥೆಯಿಂದ 25 ಲಕ್ಷ ರೂ. ಒಟ್ಟು 2.30 ಕೋಟಿ ರೂ. ವೆಚ್ಚದಲ್ಲಿ ಹಾಲಸಿದ್ಧನಾಥ ದೇಗುಲ ಅಭಿವೃದ್ಧಿಗೊಳಿಸಲಾಗುವುದು ಎಂದರು.

    ಸಹ್ಯಾದ್ರಿ ಸಹಕಾರಿ ಚೇರ್ಮನ್ ರಣಜಿತ ಮಾನೆ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಆನಂದ ಕುವಾಳೆ, ಸದಸ್ಯ ರಾಜೇಶ ಡೋಂಗಳೆ, ಆನಂದರಾವ ಯಾದವ, ರಾಜಾರಾಮ ಖೋತ, ಕುಮಾರ ಪಾಟೀಲ, ಅಶೋಕ ಕಾಂಬಳೆ, ಸಿದ್ಧಾಂತ ಗವಂಡಿ ಮಾತನಾಡಿದರು. ಸಮಿತ ಸಾಸನೆ, ಶಾಲನ ಚವ್ಹಾಣ, ಮಂಗಲ ಜಾಧವ, ಡಾ. ಜಯಸಿಂಗ್ ಮೋರೆ, ಶಿವಗೊಂಡ ಪಾಟೀಲ, ಪ್ರಕಾಶ ಶಿಂಧೆ, ಅಭಯ ಮಾನವಿ, ಅನಿಲ ಮೇಥೆ, ಕೇರಬಾ ಪಾಟೀಲ, ರಂಗರಾವ ಶೇಟಕೆ, ಸಂದೀಪ ಕಾಂಬಳೆ, ಗೌತಮ ಪವಾರ, ಕೆ.ಬಿ. ಮಾನೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts