More

    ದೇವಸ್ಥಾನ ಅಭಿವೃದ್ಧಿಗೆ ಅನುದಾನ

    ಚಿಕ್ಕೋಡಿ: ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ 2.49 ಕೋಟಿ ರೂ.ಅನುದಾನ ಮಂಜೂರಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಕಾರದಗಾ, ಬೋರಗಾವ, ಶಿರದವಾಡ, ಬೋಜ, ಗಳತಗಾ ಗ್ರಾಮಗಳ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮಂಜೂರಾದ ಅನುದಾನದ ಚೆಕ್‌ಗಳನ್ನು ದೇವಸ್ಥಾನ ಸಮಿತಿಗೆ ಈಚೆಗೆ ಹಸ್ತಾಂತರಿಸಿ ಮಾತನಾಡಿ, ರಾಜ್ಯದ ಎಲ್ಲ ದೇವಸ್ಥಾನಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಕಾರದಗಾ ಬಂಗಾಲಿ ಬಾಬಾ ಪೀರ ದರ್ಗಾದ ಯಾತ್ರಿ ನಿವಾಸ ನಿರ್ಮಾಣಕ್ಕೆ 1 ಕೋಟಿ ರೂ, ಕಾರದಗಾ ಕೇದಾರಲಿಂಗ ದೇವಸ್ಥಾನಕ್ಕೆ 10 ಲಕ್ಷ ರೂ., ದತ್ತ ಮಂದಿರಕ್ಕೆ 5 ಲಕ್ಷ ರೂ., ಬೀರದೇವ ಮಂದಿರಕ್ಕೆ 25 ಲಕ್ಷ ರೂ. ಮತ್ತು ಜಂಗಲಿ ಮಹಾರಾಜ ಮಠಕ್ಕೆ 10 ಲಕ್ಷ ರೂ. ಮಂಜೂರಾಗಿದೆ. ಚಾಂದ ಶಿರದವಾಡದ ಬೀರದೇವ ಮಂದಿರಕ್ಕೆ 10 ಲಕ್ಷ ರೂ, ಮೊದಲ ಕಂತಿನಲ್ಲಿ 5 ಲಕ್ಷ ರೂ. ಚೆಕ್ ವಿತರಿಸಿದರು. ಈಗಾಗಲೇ ಶಾಸಕರ ನಿಧಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ದೇಗುಲದ ಪೇವರ್ ಬ್ಲಾಕ್ ಅಳವಡಿಸಲಾಗಿದೆ.

    ಬೋರಗಾಂವ ಪಟ್ಟಣದ ವಾಶಿಖಾನ ಬೀರದೇವ ಮಂದಿರದ ಜೀರ್ಣೋದ್ಧಾರಕ್ಕಾಗಿ 10 ಲಕ್ಷ ರೂ. ಮಂಜೂರಾಗಿದ್ದು, ಅದರಲ್ಲಿ ಮೊದಲ ಕಂತಿನಲ್ಲಿ 5 ಲಕ್ಷ ರೂ. ಚೆಕ್ ವಿತರಿಸಿದರು. ಈ ಹಿಂದೆ ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ 5 ಲಕ್ಷ ರೂ. ಹಾಗೂ ಶಾಸಕರ ನಿಧಿಯಿಂದ 14 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

    ಗಳತಗಾದ ಬೀರದೇವ ಮಂದಿರಕ್ಕೆ 10 ಲಕ್ಷ ರೂ. ಮಂಜೂರಾಗಿದ್ದು, ಅದರಲ್ಲಿ ಮೊದಲ ಕಂತಿನಲ್ಲಿ 5 ಲಕ್ಷ ರೂ., ಭೋಜದ ಬೀರದೇವ ಮಂದಿರಕ್ಕೆ 10 ಲಕ್ಷ ರೂ. ಮಂಜೂರಾಗಿದೆ. ಅದರಲ್ಲಿ ಮೊದಲ ಕಂತಿನಲ್ಲಿ 5 ಲಕ್ಷ ರೂ. ಚೆಕ್ ವಿತರಿಸಿದರು. ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಯಕುಮಾರ ಖೋತ, ರಾಮಗೌಡ ಪಾಟೀಲ ಮತ್ತು ಅರವಿಂದ ಖರಾಡೆ, ಅಶೋಕ ಥೋರಬೋಲೆ, ಗ್ರಾಮಿಣ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜನಿ ಜಮದಾಡೆ, ಎಪಿಎಂಸಿ ಸದಸ್ಯ ನಿತೇಶ ಖೋತ, ಮುಜರಾಯಿ ಅಧಿಕಾರಿ ಶೀತಲ ನರಗಟ್ಟಿ, ಎಸ್.ಕೆ.ಮಾಳಿ, ಲಕ್ಷ್ಮಣ ಪಸಾರೆ, ಸೋಮಾ ಗಾವಡೆ, ಬಾಬಾಸಾಹೇಬ ಖೋತ, ಮೆಹಬೂಬ ಮುಜಾವರ್, ವೈಶಾಲಿ ಖರಾಡೆ, ಸುಷ್ಮಾ ಗವಳಿ, ಯೋಗಿನಿ ಕುಲಕರ್ಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts